ಮನೋರಂಜನೆ

ವಿಶ್ವಕಪ್‌ ವೇಳೆ ಆಸ್ಟ್ರೇಲಿಯಾ ಮಹಿಳೆ ಎದುರು ಬೆತ್ತಲಾಗಿದ್ದ ಗೇಲ್‌ !

Pinterest LinkedIn Tumblr

gele

ಸಿಡ್ನಿ: ಸ್ಫೋಟಕ ಬ್ಯಾಟ್ಸಮನ್ ಕ್ರಿಸ್ ಗೇಲ್ ಬಿಗ್ ಬ್ಯಾಶ್ ಲೀಗ್ (ಬಿಬಿಎಲ್) ಪಂದ್ಯಾವಳಿ ವೇಳೆ ಸಂದರ್ಶಕಿಗೆ ‘ಡೆಟಿಂಗ್ ಆಫರ್’ ಮಾಡಿ ವಿವಾದಕ್ಕೆ ಸಿಲುಕಿಕೊಂಡ ಬೆನ್ನಲ್ಲೇ ಮತ್ತೊಂದು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. 2015 ರ ಐಸಿಸಿ ವಿಶ್ವಕಪ್ ಕ್ರಿಕೆಟ್ ಪಂದ್ಯದ ವೇಳೆ ಮಹಿಳೆಯೋರ್ವಳ ಎದುರು ನಗ್ನವಾಗಿದ್ದಾರೆ ಎನ್ನುವ ಮತ್ತೊಂದು ವಿವಾದ ಹೊರಬಿದ್ದಿದೆ.

ಹೌದು.., 2015 ರ ಐಸಿಸಿ ವಿಶ್ವಕಪ್ ಕ್ರಿಕೆಟ್ ಪಂದ್ಯದ ವೇಳೆ ವೆಸ್ಟ್ ಇಂಡೀಸ್ ತಂಡದೊಂದಿಗೆ ಕೆಲಸ ಮಾಡುತ್ತಿದ್ದ ಆಸ್ಟ್ರೇಲಿಯಾದ ಮಹಿಳೆ ಗೇಲ್‌ನ ಈ ಅನುಚಿತ ವರ್ತನೆ ಕುರಿತು ಮಾಹಿತಿ ಹೊರಹಾಕಿದ್ದಾಳೆ.

ಪಂದ್ಯದ ವೇಳೆ ಡ್ರೆಸ್ಸಿಂಗ್‌ ರೂಮ್‌ಗೆ ಹೋದಾಗ ಗೇಲ್ ಟವೆಲ್ ಉಟ್ಟುಕೊಂಡಿದ್ದರು ಆ ವೇಳೆ ಅವರು ಟವೆಲ್ ತೆಗೆದು ನಗ್ನವಾಗಿ ಕಾಣಿಸಿಕೊಂಡು ನಂತರ ಗುಪ್ತಾಂಗ ತೋರಿಸಿ ಇದನ್ನು ಹುಡುಕುತ್ತಿದ್ದೀಯಾ..? ಎಂದು ಕೇಳಿರುವುದಾಗಿ ಅವಳು ಹೇಳಿದ್ದಾಳೆ. ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಮಹಿಳೆ ತನ್ನ ಹೆಸರನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾಳೆ.

Write A Comment