ಮನೋರಂಜನೆ

2016ಕ್ಕೆ ಬಾಲಿವುಡ್‌ನಲ್ಲಿ ಸಂಭವಿಸಲಿದೆ ಭಾರೀ ಕ್ಲ್ಯಾಷ್..!

Pinterest LinkedIn Tumblr

katrinaಬರುವ 2016ನೆ ಸಾಲಿಗೆ ಬಾಲಿವುಡ್‌ನಲ್ಲಿ ಭಾರಿ ಭಾರೀ ಕ್ಲ್ಯಾಷ್‌ಗಳೇ ಸಂಭವಿಸಲಿವೆಯಂತೆ..! ಗಾಬರಿಯಾಗಬೇಡಿ… ಕ್ಲ್ಯಾಷ್ ಅಂದ ಮಾತ್ರಕ್ಕೆ ಅದೇನು ಸಂಘರ್ಷಗಳೋ ಮಾರಾಯಾ ಅಂತ ಆತಂಕಗೊಳ್ಳುವ ಅಗತ್ಯವೇನೂ ಇಲ್ಲ. ಏಕೆಂದ್ರೆ, ಈ ಕ್ಲ್ಯಾಷ್‌ಗಳು ಸಂಭವಿಸುತ್ತಿರುವುದು ಬಿಡುಗಡೆಯಾಗೋ ಸಿನಿಮಾಗಳ ನಡುವೆ ಅಷ್ಟೇ. ಅಂದ ಹಾಗೆ ಯಾವಪ್ಪಾ ಅಂತಹ ಕ್ಲ್ಯಾಷ್ ಚಿತ್ರಗಳು ಅಂತಲೂ ತಲೆ ಕೆಡಿಸಿಕೊಳ್ಳೋ ಪ್ರಸಂಗವೂ ಇಲ್ಲ. ಬರುವ ಜೂನ್‌ನಲ್ಲಿ ಎರಡು ಸಿನಿಮಾ ಒಂದೇ ಬಾರಿ ಈದ್ ಮುಬಾರಕ್ ವೇಳೆ, ಇನ್ನೆರಡು ಚಿತ್ರಗಳು ಹಾಗೂ ದೀಪಾವಳಿ ಸಂದರ್ಭ ಮತ್ತೆರಡು ಸಿನಿಮಾಗಳು ಏಕ ಕಾಲಕ್ಕೆ ಬಿಡುಗಡೆಯಾಗಲಿವೆಯಂತೆ.

ಅಂದ ಹಾಗೇ ಈ ಎಲ್ಲ ಚಿತ್ರಗಳು, ಮಹಾ ಖ್ಯಾತನಾಮ ನಟ-ನಟಿಯರು, ಹಾಗೂ ಭಾರೀ ಬಜೆಟ್ಟಿನ ಚಿತ್ರಗಳಾಗಿದ್ದು , ಭಾರೀ ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳು.

ಹಾಗಾಗಿ ಈಗ ಬಾಲಿವುಡ್‌ನಲ್ಲಿ ಎಲ್ಲರೂ ಅದೇ ಲೆಕ್ಕಾಚಾರ ಹಾಕ್ತಾ ಇದಾರಂತೆ. ಮೊದಲಾಗಿ ಜೂನ್ 3ರಂದೇ ರಣಬೀರ್ ಕಪೂರ್-ಕತ್ರೀನಾಳ ಜಗ್ಗಾ ಜಸೂನ್ ಹಾಗೂ ಹೌಸ್‌ಫುಲ್‌ನ ಮುಂದುವರಿದ ಹೌಸ್‌ಫುಲ್-3 ತೆರೆಗಪ್ಪಳಿಸಲಿವೆ. 2016ರ ಈದ್ ಮುಬಾರಕ್ ಸೀಸನ್‌ನಲ್ಲೇ ಭಾರೀ ನಿರೀಕ್ಷೆಯ ನಟರಾದ ಸಲ್ಮಾನ್-ಷಾರುಖ್ ಖಾನ್‌ಗಳ ರಾಯಿಸ್ ಮತ್ತು ಸುಲ್ತಾನ್ ಬಿಡುಗಡೆ ಯಾಗಲಿವೆಯಂತೆ. ಇನ್ನು ಮೂರನೆಯದಾಗಿ ಕರಣ್ ಜೋಹರ್ ನಿರ್ದೇಶನದ ಎ ದಿಲ್ ಹೈ ಮುಷ್ಕಿಲ್ ಹಾಗೂ ಅಜಯ್ ದೇವಗನ್‌ನ ಶಿವಾಯ್ ಏಕ ಕಾಲಕ್ಕೆ ಮಾರುಕಟ್ಟೆಗೆ ಬರಲಿವೆಯಂತೆ. ನೋಡೋಣ ಯಾರ ಯಾರ ಅದೃಷ್ಟ ಹೇಗಿದೆಯೋ…?

Write A Comment