ಮನೋರಂಜನೆ

ಬಿಪಾಷಾ ಬಸು ಮದುವೆ ಖಾಯಂ : ಹುಡುಗ ಯಾರು ಗೊತ್ತೇ..!

Pinterest LinkedIn Tumblr

Bipasha-Basuಬಾಲಿವುಡ್ ಬೀದಿಗಳಲ್ಲಿ ಇದುವರೆಗೆ ಕೇಳಿ ಬರುತ್ತಿದ್ದ ಗಾಸಿಪ್ ಒಂದು ಇದೀಗ ಕಾರ್ಯರೂಪಕ್ಕೆ ಬರುವ ಸಂದರ್ಭ ಸನ್ನಿಹಿತವಾಗಿದೆ. ಅಂದಹಾಗೆ ಹಿಂದಿ ಚಿತ್ರರಂಗದ ಸುಂದರಿ ಬಿಪಾಷಾ ಬಸು ಮದುವೆ ಖಾಯಂ ಆಗಿದೆಯಂತೆ. ಈ ಅಂತೆ ಕಂತೆಯ ಬೆನ್ನೇರಿ ಹೊರಟಾಗ ಸಿಕ್ಕವರು ಬಿಪಾಷಾಳ ಬಾಯ್‌ಫ್ರೆಂಡ್ ಕರಣ್‌ಸಿಂಗ್ ಗ್ರೋವರ್. ಬಿಪಾಷಾ ಬಸು ಬಾಯ್‌ಫ್ರೆಂಡ್ ಎಂದೇ ಬಿಂಬಿತವಾಗಿರುವ ಕರಣ್‌ಸಿಂಗ್ ರೋವರ್ ಹೇಳುವ ಮಾತೇ ಬೇರೆ.

ಗ್ರೋವರ್ ಹೇಳುವ ಮಾತಿಗೂ ಬಾಲಿವುಡ್ ಸುದ್ದಿಗೂ ಏಕೋ ಒಂದಕ್ಕೊಂದು ತಾಳೆಯಾಗುತ್ತಿಲ್ಲ.ಬಾಲಿವುಡ್ ಮಂದಿ ಬಿಪಾಷಾ ಮತ್ತು ಗ್ರೋವರ್ ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂದು ಹೇಳಿದರೆ ಗ್ರೋವರ್ ಒಳ್ಳೆಯ ಸ್ನೇಹಿತರು ಯಾವತ್ತೂ ಮದುವೆ ತಂಟೆಗೇ ಹೋಗುವುದಿಲ್ಲ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳುತ್ತಿದ್ದಾನೆ. ಇದರಲ್ಲಿ ಯಾವುದು ಸರಿ, ಯಾವುದು ಸುಳ್ಳು ಎಂದು ಬಿಪಾಷಾಳನ್ನೇ ಕೇಳಿದರೆ ಇಲ್ಲ ಇಲ್ಲ ಸದ್ಯದಲ್ಲೇ ನಿಮಗೆ ಸಿಹಿ ಸುದ್ದಿ ಕೊಡಲಿದ್ದೇನೆ ಎನ್ನುತ್ತಾಳಂತೆ. ಕಾದು ನೋಡಬೇಕು…

Write A Comment