ಮನೋರಂಜನೆ

ರಮೇಶ್‌ ನಿರ್ದೇಶನದ ‘ಉತ್ತಮ ವಿಲನ್‌’ ಚಿತ್ರಕ್ಕೆ 5 ಪ್ರಶಸ್ತಿ

Pinterest LinkedIn Tumblr

1uttam-vilanಬೆಂಗಳೂರು: ನಟ ರಮೇಶ್‌ ಅರವಿಂದ್‌ ನಿರ್ದೇಶಿಸಿರುವ ಕಮಲ್‌ ಹಾಸನ್‌ ಅಭಿನಯದ “ಉತ್ತಮ ವಿಲನ್‌’ ಚಿತ್ರ ಲಾಸ್‌ ಏಂಜಲೀಸ್‌ ಸ್ವತಂತ್ರ ಚಿತ್ರೋತ್ಸವ (ಎಲ್‌ಎಐಎಫ್ ಎಫ್ಎ)ದಲ್ಲಿ 5 ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

“ಅತ್ಯುತ್ತಮ ಚಿತ್ರ’, “ಅತ್ಯುತ್ತಮ ನಟ’ (ಕಮಲ್‌ ಹಾಸನ್‌), “ಅತ್ಯುತ್ತಮ ಸಂಗೀತ'(ಗಿಬ್ರಾನ್‌), “ಅತ್ಯುತ್ತಮ ಹಾಡು’ ಮತ್ತು “ಅತ್ಯುತ್ತಮ ಧ್ವನಿಗ್ರಹಣ’ (ಕುನಾಲ್‌ ರಾಜನ್‌) ಪ್ರಶಸ್ತಿಗಳನ್ನು “ಉತ್ತಮ ವಿಲನ್‌’ ಬಾಚಿಕೊಂಡಿದೆ. ಇದರ ಜೊತೆ ರಷ್ಯನ್‌ ಚಿತ್ರೋತ್ಸವದಲ್ಲೂ ಚಿತ್ರದ ಸಂಗೀತ ನಿರ್ದೇಶನಕ್ಕೆ ಪ್ರಶಸ್ತಿ ದೊರೆತಿದೆ.

“ಸಂತೋಷವಾಗಿದೆ’
ಈ ಚಿತ್ರವನ್ನು ನಾವೆಲ್ಲಾ ಶ್ರದ್ದೆಯಿಂದ ಮಾಡಿದ್ದೆವು. ಆದರೆ ಚಿತ್ರ ಬಾಕ್ಸಾಫೀಸ್‌ನಲ್ಲಿ ಸೋತಾಗ ಎಲ್ಲರೂ ಬೇಸರಗೊಂಡಿದ್ದೆವು. ಆದರೆ ನಾವು ಒಂದು ಒಳ್ಳೆ ಚಿತ್ರವನ್ನು ಮಾಡಿದ್ದೆವು, ಯಾವುದೇ ಫಾರ್ಮುಲಾಗಳನ್ನು ನಂಬದೇ ಮಾಡಿದ ಅಪ್ಪಟ ಚಿತ್ರ ಇದು.
ಆದರೆ ಆ ಕೆಲಸ ಈಗ ಫ‌ಲ ಕೊಡುತ್ತಿದೆ. ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ್ದನ್ನು ಕೇಳಿ ಸಂತೋಷಪಟ್ಟೆ. ಕಮಲ್‌ ಮೆಸೇಜ್‌ ಕಳಿಸಿ ಖುಷಿ ಹಂಚಿಕೊಂಡರು. ಕುನಾಲ್‌ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
-ರಮೇಶ್‌ ಅರವಿಂದ್‌, “ಉತ್ತಮ ವಿಲನ್‌’ ನಿರ್ದೇಶಕ
-ಉದಯವಾಣಿ

Write A Comment