ಮನೋರಂಜನೆ

ಕರ್ನಾಟಕ ಅಲ್ಪ ಮುನ್ನಡೆ: ಪ್ರಸಿದ್ಧ್ ದಾಳಿಗೆ ಕುಸಿದ ಬಾಂಗ್ಲಾ ಬ್ಯಾಟಿಂಗ್

Pinterest LinkedIn Tumblr

1111dasಮೈಸೂರು, ಸೆ.22: ಇಲ್ಲಿ ಆರಂಭಗೊಂಡ ಮೂರು ದಿನಗಳ ಕ್ರಿಕೆಟ್ ಪಂದ್ಯದಲ್ಲಿ ರಣಜಿ ಚಾಂಪಿಯನ್ ಕರ್ನಾಟಕ ತಂಡ ಮಧ್ಯಮ ವೇಗಿ ಪ್ರಸಿದ್ಧ್ದ್ ಕೃಷ್ಣ ದಾಳಿಯ ನೆರವಿನಲ್ಲಿ ಬಾಂಗ್ಲಾದೇಶ ‘ಎ’ ವಿರುದ್ಧ ಮೇಲುಗೈ ಸಾಧಿಸಿದೆ.
ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಗ್ರೌಂಡ್‌ನಲ್ಲಿ ಪಂದ್ಯದ ಮೊದಲ ದಿನದಾಟದಂತ್ಯಕ್ಕೆ ಕರ್ನಾಟಕ ತಂಡ 49 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 163 ರನ್ ಗಳಿಸಿತ್ತು.
55 ರನ್ ಗಳಿಸಿರುವ ಶಿಶಿರ್ ಭವಾನೆ ಮತ್ತು 14 ರನ್ ಗಳಿಸಿರುವ ಜಗದೀಶ್ ಸುಚಿತ್ ಔಟಾಗದೆ ಕ್ರೀಸ್‌ನಲ್ಲಿದ್ದರು. ಕರ್ನಾಟಕ 5 ರನ್‌ಗಳ ಮುನ್ನಡೆ ಗಳಿಸಿದೆ.
ಒಂದು ಹಂತದಲ್ಲಿ 100ಕ್ಕೆ 6 ವಿಕೆಟ್ ಕಳೆದುಕೊಂಡಿದ್ದ ಕರ್ನಾಟಕ ತಂಡವನ್ನು ಆಧರಿಸಿದ ಶಿಶಿರ್ ಭವಾನೆ ಮತ್ತು ಸುಚಿತ್ 7ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 63 ರನ್‌ಗಳ ಜೊತೆಯಾಟ ನೀಡಿದರು.
ಕರ್ನಾಟಕ ತಂಡದ ಇನಿಂಗ್ಸ್ ಆರಂಭಿಸಿದ ರವಿಕುಮಾರ್ ಸಮರ್ಥ್ (25) ಮತ್ತು ಮಾಯಾಂಕ್ ಅಗರವಾಲ್ (16) ಉತ್ತಮ ಅಡಿಪಾಯ ಹಾಕಿಕೊಡುವಲ್ಲಿ ಎಡವಿದರು. ಸಾಜಿಬ್ (3-48) ಮತ್ತು ಎಸ್‌ಎಚ್ ಚೌಧರಿ (3-29) ಕರ್ನಾಟಕದ ದಾಂಡಿಗರನ್ನು ಕಾಡಿದರು.ಅಭಿಷೇಕ್ ರೆಡ್ಡಿ 38 ಎಸೆತಗಳಲ್ಲಿ 5 ಬೌಂಡರಿಗಳ ನೆರವಿನಲ್ಲಿ 28 ರನ್ ಗಳಿಸಿದರು.
ಕರ್ನಾಟಕ ತಂಡದ ಮೊತ್ತ 32.1 ಓವರ್‌ಗಳಲ್ಲಿ 100ಕ್ಕೆ ತಲುಪಿದಾಗ ರಾಬಿನ್ ಉತ್ತಪ್ಪ (1), ಚಿದಂಬರಂ ಗೌತಮ್(3) ಮತ್ತು ಶ್ರೇಯಸ್ ಗೋಪಾಲ್(17) ಔಟಾದರು. ಬಳಿಕ ಶಿಶಿರ್ ಭವಾನೆ ಮತ್ತು ಸುಚಿತ್ ತಂಡವನ್ನು ಆಧರಿಸಿದರು.
158/10: ಇದಕ್ಕೂ ಮೊದಲು ಟಾಸ್ ಜಯಿಸಿದ ಬಾಂಗ್ಲಾ ‘ಎ’ ತಂಡ ಬ್ಯಾಟಿಂಗ್ ಆಯ್ದುಕೊಂಡಿತ್ತು. ಕರ್ನಾಟಕದ ಬೌಲರ್‌ಗಳಾದ ಪ್ರಸಿದ್ಧ್ದ್ (5-49) ದಾಳಿಯ ಮುಂದೆ ಬಾಂಗ್ಲಾದ ದಾಂಡಿಗರು ರನ್ ಗಳಿಸಲು ಪರದಾಡಿದರು. 38.4 ಓವರ್‌ಗಳಲ್ಲಿ 158 ರನ್ ಗಳಿಸುವಾಗ ಆಲೌಟಾಯಿತು.
ಲಿಟನ್ ದಾಸ್(50) ಮತ್ತು ಎಸ್‌ಎಚ್ ಚೌಧರಿ (55) ಅರ್ಧಶತಕದ ಕೊಡುಗೆ ನೀಡಿದರು. ಇವರನ್ನು ಹೊರತುಪಡಿಸಿದರೆ ಸಕ್ಲೈನ್ ಸಾಜಿಬ್(ಔಟಾಗದೆ 15) ಎರಡಂಕೆಯ ಕಾಣಿಕೆ ನೀಡಿದರು.

Write A Comment