ಮನೋರಂಜನೆ

ಜಸ್ಪಾ ಚಿತ್ರ ಬಗ್ಗೆ ಐಶ್ವರ್ಯಗೆ ರೈಗೆ ನಡುಕ !

Pinterest LinkedIn Tumblr

aishwarya-rai

ಮುಂಬೈ: ಜಸ್ಪಾ ಚಿತ್ರ ಐಶ್ವರ್ಯಗೆ ರೈಗೆ ನಡುಕ ಹುಟ್ಟಿಸಿದೆ. ಐದು ವರ್ಷಗಳ ದೊಡ್ಡ ಅಂತರದ ನಂತರ ನಟಿ ಐಶ್ವರ್ಯ ರೈ ಬಾಲಿವುಡ್‍ಗೆ ‘ಜಸ್ಬಾ’ ಚಿತ್ರದ ಮೂಲಕ ಕಮ್‍ಬ್ಯಾಕ್ ಮಾಡುತ್ತಿದ್ದು, ಸಂಜಯ್ ಗುಪ್ತಾ ನಿರ್ದೇಶಿಸಿ, ಇರ್ಫಾನ್ ಖಾನ್ ಜೊತೆ ನಟಿಸಿರುವ ಈ ಚಿತ್ರ ಬಿಡುಗಡೆಯ ದಿನಗಳು ಹತ್ತಿರ ಬರುತ್ತಿದ್ದು ನನಗೆ ನಡುಕ ಹುಟ್ಟಿಸಿದೆ ಎಂದು ಐಶ್ವರ್ಯ ರೈ ಹೇಳಿದ್ದಾರೆ.

ಚಿತ್ರದ ಬಗ್ಗೆ ಮತ್ತು ನನ್ನ ಕಮ್‍ಬ್ಯಾಕ್ ಚಿತ್ರ ಎನ್ನುವ ಕಾರಣಕ್ಕೆ ನನ್ನ ಮೇಲೆ ಇರುವ ನಿರೀಕ್ಷೆ ನನಗೆ ನಡುಕ ಹುಟ್ಟಲು ಕಾರಣವಾಗಿದೆ. ಅಕ್ಟೋಬರ್ ತುಂಬಾ ದೂರವಿಲ್ಲ, ರಿಲೀಸ್‍ಗೆ ಹೆಚ್ಚು ಸಮಯ ಉಳಿದಿಲ್ಲ ಎಂದು ಚಿತ್ರ ಮುಗಿದ ಖುಷಿಯನ್ನು ಹಂಚಿಕೊಳ್ಳಲು ಆಯೋಜಿಸಿದ್ದ ಪಾರ್ಟಿಯಲ್ಲಿ ಐಶ್ವರ್ಯ ರೈ ಹೇಳಿದ್ದಾರೆ.

ಜಸ್ಬಾ ಚಿತ್ರದಲ್ಲಿ ವಕೀಲೆ ಪಾತ್ರದಲ್ಲಿ ಐಶ್ವರ್ಯ ನಟಿಸಿದ್ದರೆ, ಖಡಕ್ ಪೊಲೀಸ್ ಪಾತ್ರದಲ್ಲಿ ಇರ್ಫಾನ್ ಖಾನ್ ಕಾಣಿಸಲಿದ್ದಾರೆ. ಸಂಜಯ್ ಮತ್ತು ಇರ್ಫಾನ್ ಕೆಲಸ ಮಾಡಿದ ಅನುಭವ ಚೆನ್ನಾಗಿತ್ತು ಎಂದು ಹೇಳುವ ಐಶ್ವರ್ಯ ಚಿತ್ರ ನೋಡುವ ತವಕದಲ್ಲಿ ಇದ್ದಾರೆ. ಅಕ್ಟೋಬರ್ 9ರಂದು ಜಸ್ಬಾ ಚಿತ್ರ ತೆರೆಗೆ ಬರಲಿದೆ.

Write A Comment