ಮನೋರಂಜನೆ

ಕುತೂಹಲ ಕೆರಳಿಸಿದ ಅಮೀರ್ ಖಾನ್ ‘ದಂಗಲ್’ ಚಿತ್ರದ ಫಸ್ಟ್ ಲುಕ್

Pinterest LinkedIn Tumblr

dangal-poster

ಮುಂಬೈ: ನಟ ಅಮೀರ್ ಖಾನ್ ‘ಪಿಕೆ’ಯಂತಹ ಹಿಟ್ ಚಿತ್ರದ ನಂತರ ‘ದಂಗಲ್’ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಚಿತ್ರದ ಫಸ್ಟ್ ಲುಕ್‍ನ್ನು ಟ್ಟಿಟ್ಟರ್‍ನಲ್ಲಿ ಹೊರ ಹಾಕಿದ್ದಾರೆ. ಮಣ್ಣಿನ ಹೊದಿಕೆಯಿಂದ ಆವೃತವಾಗಿರುವ ಅಮೀರ್ ಮುಖ ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚು ಮಾಡಿದೆ.

ಮಹಾವೀರ್ ಸಿಂಗ್ ಫಗತ್ ಎಂಬ ಕುಸ್ತಿಪಟುವಿನ ಜೀವನಚರಿತ್ರೆಯನ್ನು ಹೊಂದಿರುವ ‘ದಂಗಲ್’ ಚಿತ್ರದಲ್ಲಿ ಕುಸ್ತಿಪಟುವಿನ ತಂದೆ ಪಾತ್ರಕ್ಕಾಗಿ ಅಮೀರ್ 20 ಕೆಜಿ ತೂಕವನ್ನು ಹೆಚ್ಚಿಸಿಕೊಂಡಿದ್ದಾರೆ.

ಲುಧಿಯಾನದಲ್ಲಿ ಚಿತ್ರೀಕರಣಗೊಳ್ಳುತ್ತಿರುವ ದಂಗಲ್ ಚಿತ್ರದಲ್ಲಿ ಮೊದಲ ನೋಟವನ್ನು ಟ್ವಿಟರ್‍ನಲ್ಲಿ ಬಿಟ್ಟಿರುವ ಅಮೀರ್ ‘ಆಜ್ ಸೆ ದಂಗಲ್ ಶುರು’ ಎಂದಿದ್ದಾರೆ. ‘ಚಿಲ್ಲರ್ ಪಾರ್ಟಿ’ ಮತ್ತು ‘ಭೂತನಾಥ್ ರಿಟನ್ರ್ಸ್’ ನಿರ್ದೇಶಿಸಿದ್ದ ನಿತೇಶ್ ತಿವಾರಿ ದಂಗಲ್‍ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. 2013ರ ಬ್ಲಾಕ್ ಬಾಸ್ಟರ್ ಹಿಟ್ ‘ಧೂಮ್ 3′ ಚಿತ್ರಕ್ಕೆ ಸಂಗೀತ ನೀಡಿದ್ದ ಪ್ರೀತಂ ಮತ್ತೆ ದಂಗಲ್‍ನಲ್ಲಿ ಅಮೀರ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಇಷ್ಟೆಲ್ಲಾ ವಿಶೇಷತೆಗಳನ್ನು ಒಳಗೊಂಡಿರುವ ದಂಗಲ್ 2016ರ ಕ್ರಿಸ್ಮಸ್ ಹಬ್ಬದಂದು ತೆರೆಗೆ ಬರಲು ಸಿದ್ಧವಾಗುತ್ತಿದೆ.

Write A Comment