ಮನೋರಂಜನೆ

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್’ಗೆ ಕಂಕಣ ಭಾಗ್ಯ

Pinterest LinkedIn Tumblr

prajಸ್ಯಾಂಡಲ್ ವುಡ್’ನ ಡೈನಾಮಿಕ್ ಹೀರೊ ದೇವರಾಜ್’ರವರ ಹಿರಿಯ ಪುತ್ರ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ.

20ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿರುವ ಪ್ರಿನ್ಸ್ ಪ್ರಜ್ವಲ್ ಬೆಂಗಳೂರು ಮೂಲದ ನೃತ್ಯಗಾರ್ತಿ ಹಾಗೂ ರೂಪದರ್ಶಿಯಾಗಿರುವ ರಾಗಿಣಿ ಚಂದ್ರನ್’ರನ್ನು ವರಿಸಲಿದ್ದಾರೆ.

ಮುಂಬರುವ ಅಕ್ಟೋಬರ್ ತಿಂಗಳ 20ರಿಂದ 25ರ ದಿನಾಂಕದೊಳಗೆ ಡೈನಾಮಿಕ್ ಪ್ರಿನ್ಸ್ ರಾಗಿಣಿಯ ಕೈಹಿಡಿಯಲಿದ್ದಾರೆ  ಎಂದು ನಿಕಟ ಮೂಲಗಳು ಹೇಳಿಕೊಂಡಿವೆ.

ಅನೇಕ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ರಾಗಿಣಿ ಚಂದ್ರನ್’ರನ್ನು ವಿವಾಹವಾಗುವ ಮೂಲಕ ಪ್ರಜ್ವಲ್ ದೇವರಾಜ್ ತಮ್ಮ ಬ್ಯಾಚುಲರ್ ಲೈಫ್’ಗೆ ಇತಿಶ್ರೀ ಹಾಡಲಿದ್ದಾರೆ.
-ಕಪ್ಪು ಮೂಗುತ್ತಿ
-ಉದಯವಾಣಿ

Write A Comment