ಮನೋರಂಜನೆ

ಐರಾವತ ಚಿತ್ರದ ಟಿಕೆಟ್ ದಾಖಲೆ ಬೆಲೆಗೆ ಮಾರಾಟ !

Pinterest LinkedIn Tumblr

zahirಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಐರಾವತ ಚಿತ್ರದ ಮೊದಲ ಶೋ ಟಿಕೆಟ್ ದಾಖಲೆ ಬೆಲೆಗೆ ಮಾರಾಟವಾಗಿದೆ ಎಂದು ಸಾಮಾಜಿಕ ತಾಣದಲ್ಲಿ ಹೇಳಲಾಗಿದೆ.

ಎ.ಪಿ ಅರ್ಜುನ್ ನಿರ್ದೇಶನದ ಈ ಚಿತ್ರದ ಮೊದಲ ಟಿಕೆಟ್’ನ್ನು ಬರೋಬ್ಬರಿ 1 ಲಕ್ಷ ರೂ. ನೀಡಿ ಖರೀದಿಸಲಾಗಿದೆ ಎಂದು ಸಾಮಾಜಿಕ ತಾಣದಲ್ಲಿ ಸಂದೇಶ್ ನಾಗರಾಜ್ ಹೇಳಿಕೊಂಡಿದ್ದಾರೆ.

ಅಂದಹಾಗೆ ಈ ಟಿಕೆಟ್’ನ್ನು ಖರೀದಿ ಮಾಡಿದವರು ಮತ್ತ್ಯಾರು ಅಲ್ಲ ಗಜನ ಗೆಳೆಯ ಸೃಜ ಅರ್ಥಾತ್ ಸೃಜನ್ ಲೊಕೇಶ್. ಸೃಜ ಐರಾವತ ಚಿತ್ರದ ಮೊದಲ ಶೋನ ಮೊದಲ ಟಿಕೆಟ್’ನ್ನು ಮುಂಚಿತವಾಗಿ ಖರೀದಿಸಿದ್ದಾರೆ ಎಂದು ಸಂದೇಶ್ ನಾಗರಾಜ್ ಹೇಳಿಕೊಂಡಿದ್ದಾರೆ.

ಈ ಹಿಂದೆ ಐರಾವತ ಚಿತ್ರದ ವಿತರಣಾ ಹಕ್ಕು ದಾಖಲೆ ಬೆಲೆಗೆ ಮಾರಾಟವಾಗಿ ಸಖತ್ ಸುದ್ದಿಯಾಗಿತ್ತು. ಅಲ್ಲದೆ ಚಿತ್ರ ಬಿಡುಗಡೆಗೆ ಮುನ್ನವೇ ನಿರ್ಮಾಪಕರು ಸೇಫ್ ಆಗಿದ್ದಾರೆ ಎಂದು ಹೇಳಲಾಗಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಊರ್ವಶಿ ರೌತೆಲಾ ನಟಿಸಿರುವ ಐರಾವತ ಚಿತ್ರದಲ್ಲಿ ಖಡಕ್ ಖಳನಾಗಿ ಪ್ರಕಾಶ್ ರಾಜ್ ನಟಿಸಿದ್ದಾರೆ. ಚಿತ್ರವು ಅಕ್ಟೋಬರ್-1ಕ್ಕೆ ರಾಜ್ಯಾದ್ಯಂತ ತೆರೆಕಾಣಲಿದೆ.
-ಕಪ್ಪು ಮೂಗುತ್ತಿ
-ಉದಯವಾಣಿ

Write A Comment