ಮನೋರಂಜನೆ

ಡೇವಿಸ್ ಕಪ್: ಸ್ವಿಝರ್‌ಲೆಂಡ್ ಗೆಲುವಿಗೆ ಫೆಡರರ್ ನೆರವು

Pinterest LinkedIn Tumblr

22rogerfedererdaviscup-getty2109-800 ಜಿನೇವಾ, ಸೆ.21: ಸ್ಟಾರ್ ಆಟಗಾರ ರೋಜರ್ ಫೆಡರರ್ ಸ್ವಿಝರ್‌ಲೆಂಡ್ ತಂಡ ಹಾಲೆಂಡ್ ವಿರುದ್ಧ ಡೇವಿಸ್ ಕಪ್ ಗ್ರೂಪ್ ಪ್ಲೇ ಆಫ್ ಪಂದ್ಯದಲ್ಲಿ ಸುಲಭ ಗೆಲುವು ಸಾಧಿಸಲು ನೆರವಾಗಿದ್ದಾರೆ. ರವಿವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ 17 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಫೆಡರರ್ ಹಾಲೆಂಡ್‌ನ ಥಿಯೆಮೊ ಡಿ ಬಾಕೆರ್ ವಿರುದ್ಧ 6-3, 6-2, 6-4 ಸೆಟ್‌ಗಳಿಂದ ಗೆಲುವು ಸಾಧಿಸಿದರು. ಈ ಗೆಲುವಿನೊಂದಿಗೆ ಸ್ವಿಸ್‌ಗೆ 3-1 ಮುನ್ನಡೆ ಒದಗಿಸಿಕೊಟ್ಟ ಫೆಡರರ್ ವಿಶ್ವ ಗ್ರೂಪ್‌ನಲ್ಲಿ ಸ್ಥಾನ ಪಡೆಯಲು ನೆರವಾಗಿದ್ದಾರೆ.

111 ವರ್ಷಗಳ ನಂತರ ಬೆಲ್ಜಿಯಂ ಡೇವಿಸ್‌ಕಪ್ ಫೈನಲ್‌ಗೆ ಬ್ರುಸ್ಸೆಲ್ಸ್, ಸೆ.21: ಅರ್ಜೆಂಟೀನ ವಿರುದ್ಧದ ಐದನೆ ಪಂದ್ಯದಲ್ಲಿ ಫೆಡೆರಿಕೊ ಡೆಲ್ಬಾನಿಸ್‌ರನ್ನು ಮಣಿಸಿರುವ ಸ್ಟೀವ್ ಡಾರ್ಸಿಸ್ ಬೆಲ್ಜಿಯಂ ತಂಡ 111 ವರ್ಷಗಳ ನಂತರ ಮೊದಲ ಬಾರಿ ಡೇವಿಸ್ ಕಪ್ ಫೈನಲ್‌ಗೆ ತಲುಪಲು ನೆರವಾಗಿದ್ದಾರೆ.
ಡಾರ್ಸಿಸ್ ಮೊದಲ ಸಿಂಗಲ್ಸ್ ಪಂದ್ಯ ಹಾಗೂ ಶನಿವಾರ ನಡೆದಿದ್ದ ಡಬಲ್ಸ್ ಪಂದ್ಯಗಳಲ್ಲಿ ಸೋತ ಹಿನ್ನೆಲೆಯಲ್ಲಿ ಅರ್ಜೆಂಟೀನ 2-1 ಮುನ್ನಡೆ ಸಾಧಿಸಿತ್ತು. ರವಿವಾರ ನಡೆದ ಎರಡನೆ ಸಿಂಗಲ್ಸ್ ಪಂದ್ಯದಲ್ಲಿ ಅರ್ಜೆಂಟೀನದ ಡೆಲ್ಬಾನಿಸ್‌ರನ್ನು 6-4, 2-6, 7-5, 7-6(3) ಸೆಟ್‌ಗಳಿಂದ ಮಣಿಸಿದರು.

1904ರ ನಂತರ ಮೊದಲ ಬಾರಿ ಡೇವಿಸ್‌ಕಪ್ ಫೈನಲ್‌ಗೆ ಪ್ರವೇಶಿಸಿರುವ ಬೆಲ್ಜಿಯಂ ತಂಡ ನ.27 ರಿಂದ 29ರ ತನಕ ನಡೆಯಲಿರುವ ಪಂದ್ಯದಲ್ಲಿ ಬ್ರಿಟನ್ ತಂಡವನ್ನು ಎದುರಿಸಲಿದೆ.

Write A Comment