ಮನೋರಂಜನೆ

ಮಾಂಸ ನಿಷೇಧಕ್ಕೆ ಸೋನಾಕ್ಷಿ ಸಿನ್ಹಾ ಅಸಮಾಧಾನ; ಸೋನಾಕ್ಷಿ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ

Pinterest LinkedIn Tumblr

sonakshi-sinhaಪ್ರಚಲಿತ ವಿದ್ಯಾಮಾನಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಟ-ನಟಿಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಟೀಕೆಗಳಿಗೊಳಗಾಗುವುದು ಹೊಸದೇನಲ್ಲ. ಈ ಹಿಂದೆಯೂ ನಟ ಸಲ್ಮಾನ್ ಖಾನ್ ಮುಂಬೈ ಸರಣಿ ಸ್ಪೋಟದ ಆರೋಪಿ ಯಾಕುಬ್ ಮೆಮನ್ ಪರವಾಗಿ ಟ್ವೀಟ್ ಮಾಡಿ ಹಲವು ವಿವಾದಗಳಿಗೆ ಸಿಲುಕಿದ್ದರೆನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಇದೀಗ ಬಾಲಿವುಡ್ ನಟಿ ಸೋನಾಕ್ಷಿ ಸಹ ಮೊದಲ ಬಾರಿಗೆ ರಾಜಕೀಯ ಪ್ರೇರಿತ ವಿಷಯವೊಂದರ ಬಗ್ಗೆ ಟೀಕೆ ಮಾಡಿ ಟ್ವಿಟರ್ ನಲ್ಲಿ ಹಲವು ಟೀಕೆಗಳಿಗೊಳಗಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ನಾಲ್ಕು ದಿನಗಳ ಕಾಲ ಮಾಂಸ ಮಾರಾಟ ನಿಷೇಧಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿರು ಸೋನಾಕ್ಷಿ ಸಿನ್ಹಾ ಅವರು ನಿನ್ನೆ ಟ್ವಿಟರ್ ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ನಮ್ಮದು ಸ್ವತಂತ್ರ ದೇಶ! ಬ್ಯಾನ್-ಇಸ್ತಾನ್ ಗೆ ಸ್ವಾಗತ….ಇದರ ಅರ್ಥ ಭಾರತ…ಎಂದು ಹೇಳಿದ್ದರು.

This is a free country! Welcome to BAN-istan… I meant india.. Stupid autocorrect.
— Sonakshi Sinha (@sonakshisinha) September 8, 2015

ನಂತರ ಮತ್ತೊಂದು ಸಂದೇಶದಲ್ಲಿ ನಿರ್ಲಕ್ಷ್ಯ ಅಥವಾ ಸೋಮಾರಿತನಗಳಿಗೇಕೆ ನಮ್ಮ ದೇಶ ನಿಷೇಧ ಹೇರುವುದಿಲ್ಲ? ಪ್ರವಾಹ ಪೀಡಿತ ಅಸ್ಸಾಂ ಪ್ರದೇಶಗಳ ಕಥೆ ಏನಾಯಿತು ಎಂದು ಹೇಳಿದ್ದರು.

Why no ban on ignorance/negligence? What about the flood affected people of assam? Priorities people. Priorities.
— Sonakshi Sinha (@sonakshisinha) September 8, 2015

ಸೋನಾಕ್ಷಿ ಅವರ ಈ ಹೇಳಿಕೆ ಇದೀಗ ಟ್ವಿಟರ್ ನಲ್ಲಿ ಹಲವು ಟೀಕೆಗಳು ವ್ಯಕ್ತವಾಗುತ್ತಿದ್ದು, ಮಾಂಸಾಹಾರದ ಪರವಾಗಿರುವವರು, ಸೋನಾಕ್ಷಿ ಸಿನ್ಹಾಳನ್ನು ಬೆಂಬಲಿಸಿದರೆ, ಸಸ್ಯಾಹಾರಿಗಳು ಆಕೆಯ ಟ್ವಿಟ್ಟರ್ ಪೇಜ್ ನೊಳಗೆ ನುಗ್ಗಿ ಆಕೆಗೆ ಬೈಗುಳ ಟೀಕೆಗಳ ಸುರಿಮಳೆಗೈದಿದ್ದಾರೆ.

ಟ್ವಿಟ್ಟರ್ ನಲ್ಲಿ ಇಂತಹ ಟೀಕೆಗಳು ವ್ಯಕ್ತವಾಗುವುದು ಸೋನಾಕ್ಷಿಗೇನೂ ಹೊಸತಲ್ಲ. ಆಕೆ ಟ್ವಿಟ್ಟರ್ ನಲ್ಲಿ ತುಂಬಾ ಬಾರಿ ವಿವಾದಕ್ಕೆ ಸಿಲುಕಿಕೊಂಡಿದ್ದಳು. ಆದರೆ ಅವೆಲ್ಲಾ ವೈಯಕ್ತಿಕ ಹಾಗೂ ಸಿನೆಮಾ ಲೋಕದ ಜನಕ್ಕೆ ಸಂಬಂಧಿಸಿದ್ದು. ಆದರೆ ಇದೀಗ ಸೋನಾಕ್ಷಿ ರಾಜಕೀಯ ಪ್ರೇರಿತ ವಿಷಯವೊಂದರ ಬಗ್ಗೆ ಟೀಕೆ ಮಾಡಿರುವುದು ಟೀಕಾಕಾರರಿಗೆ ಆಹಾರ ಸಿಕ್ಕಂತಾಗಿದೆ.

Write A Comment