ಭಾರತ ಕ್ರಿಕೆಟ್ ತಂಡದ ಎಡಗೈ ದಾಂಡಿಗ ಸುರೇಶ್ ರೈನಾ ಶೀಘ್ರದಲ್ಲೇ ಬಿಟೌನ್’ಗೆ ಎಂಟ್ರಿ ಕೊಡಲಿದ್ದಾರೆ. ರೈನಾ ಬ್ಯಾಟ್ ಕೆಳಗಿಟ್ಟು ಹೀರೊ ಆಗೋಕೆ ಹೊರಟಿದ್ದಾರೆ ಅಂದ್ಕೋಬೇಡಿ.
ವಿಭಿನ್ನವಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಭಾರತ ತಂಡದ ಖ್ಯಾತ ಫೀಲ್ಡರ್ ರೈನಾ ಪ್ಲಾನ್ ಹಾಕಿದ್ದಾರೆ ಅನಿಸುತ್ತೆ. ಹೌದು ಇದೇ ಮೊದಲ ಬಾರಿಗೆ ಬಾಲಿವುಡ್ ಚಿತ್ರವೊಂದಕ್ಕೆ ಸುರೇಶ್ ರೈನಾ ಸಿಂಗರ್ ಆಗುತ್ತಿದ್ದಾರೆ.
ಮೀರುತಿಯಾ ಗ್ಯಾಂಗ್ಸ್ಟರ್ಸ್ ಎಂಬ ಚಿತ್ರದ ವಿಶೇಷ ಗೀತೆಯನ್ನು ಸ್ವಂತಃ ರೈನಾ ಹಾಡಲಿದ್ದಾರೆ. ಚಿತ್ರದ ನಿರ್ಮಾಪಕ ಶೊಯೆಬ್ ಅಹ್ಮದ್ ರೈನಾ ಕುಟುಂಬಕ್ಕೆ ಆತ್ಮೀಯರಾಗಿರುದರಿಂದ ಚಿತ್ರದ ಒಂದು ಗೀತೆಯನ್ನು ಹಾಡಲು ಕೇಳಿಕೊಂಡಿದ್ದಾರೆ.
ಇದಕ್ಕೆ ಒಪ್ಪಿರುವ ರೈನಾ ಮುಂಬರುವ ಭಾನುವಾರದಂದು ಗೀತೆಯ ರೆಕಾರ್ಡಿಂಗ್ ಮಾಡಲು ರೆಡಿಯಾಗಿದ್ದಾರೆ.
ಝೈಝಾನ್ ಖಾದ್ರಿ ನಿರ್ದೇಶಿಸಿರುವ ಕ್ರೈಂ-ಕಾಮೆಡಿ ಚಿತ್ರ ಮೀರುತಿಯಾ ಗ್ಯಾಂಗ್ಸ್ಟರ್ಸ್ ಮೂಲಕ ಸುರೇಶ್ ರೈನಾ ಬಾಲಿವುಡ್’ಗೆ ಗಾಯಕರಾಗಿ ಪದಾರ್ಪಣೆ ಮಾಡುವ ಮೂಲಕ ಹೊಸ ಹೆಜ್ಜೆಯನ್ನಿಡುತ್ತಿರುವುದು ವಿಶೇಷ.
-ಕಪ್ಪು ಮೂಗುತ್ತಿ
-ಉದಯವಾಣಿ