ಮನೋರಂಜನೆ

3 ತಿಂಗಳ ಗರ್ಭಿಣಿ ಬಾಕ್ಸಿಂಗ್ ಆಡಿ ಚಾಂಪಿಯನ್ ಆದಳು!

Pinterest LinkedIn Tumblr

Kinberly-Novaesಗರ್ಭಿಣಿಯರು ತಮ್ಮ ಬಗ್ಗೆ ಎಷ್ಟು ಮುತುವರ್ಜಿ ವಹಿಸಿದ್ರೂ ಸಾಲದು. ಆದರೆ, ಇಲ್ಲೊಬ್ಬಳು ಬಾಕ್ಸಿಂಗ್  ಡಿ ಚಾಂಪಿಯನ್ ಕೂಡ ಆಗಿದ್ದಾಳೆ! ಬ್ರೆಜಿಲ್‍ನ ಈ ಬಾಕ್ಸಿಂಗ್‍ಪಟು ಹೆಸರು ಕಿನ್ಬರ್ಲಿ ನೋವಾಸ್.

24 ವರುಷದ ಈಕೆ ಇತ್ತೀಚೆಗೆ ನಡೆದ ಎಂಎಂಎ (ಮಿಕ್ಸ್ಡ್ ಮಾರ್ಷಿಯಲ್ ಆರ್ಟ್) ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಈ ಸಾಹಸ ಮಾಡಿದಳು. ಇದನ್ನಾಡುವಾಗ ಕಿಂಬರ್ಲಿ 3 ತಿಂಗಳ ಗರ್ಭಿಣಿ. ಈಕೆಗಿದು ಗೊತ್ತಿರಲಿಲ್ಲ. ಈ ಟೂರ್ನಿ ಆಡುವಾಗ ತಲೆ ಸುತ್ತುವಿಕೆ, ವಾಂತಿ ಬಂದಿತ್ತಂತೆ. ಪಂದ್ಯ ಮುಗಿದ ಬಳಿಕ ವೈದ್ಯರ ಬಳಿ ಹೋದಾಗ ಈ ಸಂಗತಿ ಗೊತ್ತಾಗಿ ಕಿನ್ಬರ್ಲಿ ಶಾಕ್ ಆಗಿದ್ದಾಳೆ!

ತಾನಾಡಿದ ಮಾ್ಯಚುಗಳ ರಿಲೇ ನೋಡಿದಾಗ ಈಕೆಯ ಹೊಟ್ಟೆಗೆ 60ಕ್ಕೂ ಅಧಿಕ ಪೆಟ್ಟುಗಳು ಬಿದ್ದಿವೆ. ಸಾಲದ್ದಕ್ಕೆ ಟ್ರೆಡ್‍ಮಿಲ್‍ನಲ್ಲಿ ಸುಸ್ತಾಗೋ ತನಕ ಓಡಿದ್ದಾಳೆ. ಆದರೂ, ಮಗುವಿಗೇನೂ ಆಗಿಲ್ಲ. ಈಗಿವಳು 6 ತಿಂಗಳ ಗರ್ಭಿಣಿ. ಟ್ವೀಟರ್‍ನಲ್ಲಿ ಈಗ 3 ತಿಂಗಳ ಹಿಂದಿನ ತನ್ನ ಕಥೆಯನ್ನು ಕಿಂಬರ್ಲಿ ಹಾಕ್ಕೊಂಡು, ಅಭಿಮಾನಿಗಳ ಎದೆಯನ್ನೂ ನಡುಗಿಸಿದ್ದಾಳೆ. ನಿಜಕ್ಕೂ ಈಕೆ ಮಹಾತಾಯಿ!

Write A Comment