ಮನೋರಂಜನೆ

ಟ್ರೈಲರ್ ಮೂಲಕ ಕುತೂಹಲ ಮೂಡಿಸಿದ ಐಶ್ ಅಭಿನಯದ ‘ಜಝ್ಬಾ’

Pinterest LinkedIn Tumblr

juಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಇದೇ ಮೊದಲ ಬಾರಿ ಜಝ್ಬಾ ಚಿತ್ರದಲ್ಲಿ ಲಾಯರ್ ಪಾತ್ರದಲ್ಲಿ ಕಾಣಿಸುತ್ತಿದ್ದಾರೆ. ಐಶ್’ರ ಕಂಬ್ಯಾಕ್ ಚಿತ್ರವಾಗಿದ್ದರಿಂದ ಚಿತ್ರದ ಮೇಲೆ ಬಿಟೌನ್’ನಲ್ಲಿ ಬಹು ನಿರೀಕ್ಷೆಯಿತ್ತು. ಸದ್ಯ ಚಿತ್ರದ ಟ್ರೈಲರ್ ರಿಲೀಸ್ ಮಾಡಿರುವ ಚಿತ್ರತಂಡ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚುವಂತೆ ಮಾಡಿದ್ದಾರೆ.

ನಿರ್ದೇಶಕ ಸಂಜಯ್ ಗುಪ್ತಾ  ಸೆವೆನ್ ಡೇಸ್ ಎಂಬ ಕೊರಿಯನ್ ಚಿತ್ರವನ್ನು ಬಾಲಿವುಡ್’ಗೆ  ಜಝ್ಬಾ ಶೀರ್ಷಿಕೆಯಲ್ಲಿ ರಿಮೇಕ್ ಮಾಡಿದ್ದಾರೆ. ಈ ಚಿತ್ರವು  ತಾಯಿ-ಮಗಳ ಸೆಂಟಿಮೆಂಟ್’ನೊಂದಿಗೆ ಕ್ರೈಂ ಥ್ರಿಲ್ಲರ್ ಸಸ್ಪೆನ್ಸ್ ಕಥೆಯನ್ನು ಹೊಂದಿದೆ.

ಚಿತ್ರದ ಪ್ರಮುಖ ಪಾತ್ರಗಳಲ್ಲಿ ಇರ್ಫಾನ್ ಖಾನ್, ಶಬಾನಾ ಅಜ್ಮಿ,ಜಾಕಿ ಶ್ರಾಫ್ ಕಾಣಿಸಿಕೊಂಡಿದ್ದು ಇಲ್ಲಿ ಮಾಜಿ ವಿಶ್ವ ಸುಂದರಿ ಕೆಲ ಸಾಹಸ ಸನ್ನಿವೇಶಗಳನ್ನು ಮಾಡಿದ್ದಾರೆ ಎಂದು ಹೇಳಲಾಗಿದೆ.

ಜಝ್ಭಾ ಮೂಲಕ ಬಾಲಿವುಡ್’ನಲ್ಲಿ ಸೆಕೆಂಡ್ ಇನಿಂಗ್ಸ್ ಆರಂಭಿಸಲಿರುವ ಐಶ್ವರ್ಯಾ ರೈ ಟ್ರೈಲರ್’ನಲ್ಲೇ ತಮ್ಮ ಮನೋಜ್ಙ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ. ಈ ಚಿತ್ರವನ್ನು ಅಕ್ಟೋಬರ್ 9ರಂದು ತೆರೆಗೆ ತರಲು ನಿರ್ದೇಶಕ ಸಂಜಯ್ ಗುಪ್ತಾ ಯೋಜನೆ ಹಾಕಿಕೊಂಡಿದ್ದಾರೆ.
-ಕಪ್ಪು ಮೂಗುತ್ತಿ
-ಉದಯವಾಣಿ

Write A Comment