ಮನೋರಂಜನೆ

ಸೆಪ್ಟೆಂಬರ್‌ನಲ್ಲಿ ‘ಐಸ್​​​​​ಕ್ರೀಮ್’ ತೆರೆಗೆ

Pinterest LinkedIn Tumblr

iceಪತ್ರಕರ್ತರಾದ ವೇಣುಗೋಪಾಲ್​​ ಶೆಟ್ಟಿ ಮತ್ತು ಪ್ರೀತಮ್​​ ಸಾಗರ್ ನಿರ್ದೇಶನದ ತುಳು ಚಿತ್ರ ‘ಐಸ್​​ಕ್ರೀಮ್’ ಚಿತ್ರೀಕರಣ ಪೂರ್ಣಗೊಳಿಸಿದ್ದು ತೆರೆಗೆ ಬರಲು ಸಿದ್ಧವಾಗಿದೆ. ​​ಪ್ರೀತಿ, ಕುಟುಂಬ, ಹಾರರ್, ಆ್ಯಕ್ಷನ್, ಕಾಮಿಡಿ ಹೀಗೆ ಪಕ್ಕಾ ಪ್ಯಾಕೇಜ್ ಸಿನಿಮಾದ ಸ್ವಾದ ‘ಐಸ್​​ಕ್ರೀಮ್’ನಲ್ಲಿದೆಯಂತೆ.

ಸ್ನೇಹಿತರಿಂದ ಸವಾಲು ಸ್ವೀಕರಿಸುವ ನಾಯಕ ಹೊಸ ಸಾಹಕ್ಕೆ ಮುಂದಾಗುವುದು ಆ ನಂತರದ ಘಟನಾವಳಿಗಳ ಸುತ್ತ ಚಿತ್ರವಿದೆ. ಸ್ನೇಹಿತರ ಜೊತೆ ಛಾಲೆಂಜ್​​​​ ಸ್ವೀಕರಿಸಿದ ನಾಯಕ ಹೊಸ ಸಾಹಸಕ್ಕೆ ಕೈ ಹಾಕ್ತಾನೆ. ಮುಂದೇನಾಗುತ್ತೆ ಅನ್ನೋದೆ ಸಿನಿಮಾದ ಸಸ್ಪೆನ್ಸ್.   ಐಸ್​​​ಕ್ರೀಮ್​​ ಸಹ ಇಲ್ಲಿ ಮುಖ್ಯ ಪಾತ್ರ ವಹಿಸುವ ಕಾರಣಕ್ಕೆ ಈ ಟೈಟಲ್​​ ಬಳಸಲಾಗಿದೆ.

ರೂಪೇಶ್ ಶೆಟ್ಟಿ ಮತ್ತು ಅನ್ವಿತಾ ರಾವ್​​​ ಮುಖ್ಯಭೂಮಿಕೆಯ ಚಿತ್ರದಲ್ಲಿ, ಚೇತನ್​ ರೈ ಮಾಣಿ, ರೋಹಿಣಿ ಜಗರಾಂ ಇತರರು ನಟಿಸಿದ್ದಾರೆ.  ನವಿತಾ ಜೈನ್​​​ ನಿರ್ಮಾಪಕ.​​​​​ ರಾಜೇಶ್​​ ಹಳೆಯಂಗಡಿ ಛಾಯಾಗ್ರಹಣ, ಮದನ್​​ – ಮೋಹನ್​​​ ಸಂಗೀತವಿದ್ದು ​​ಆಗಸ್ಟ್ 22ರಂದು ಮಂಗಳೂರಿನಲ್ಲಿ ಆಡಿಯೊ ಬಿಡುಗಡೆಯಾಗಲಿದೆ. ಸೆಪ್ಟೆಂಬರ್​​ನಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ.

Write A Comment