ಸದಾ ತಮ್ಮ ನೀಳಕಾಯವನ್ನು ಕಾಪಾಡಿಕೊಳ್ಳಲು ಬಯಸುವ ನಟಿ ಮಲೈಕಾ ಅರೋರ ಖಾನ್, ‘ಫಿಟ್‌ನೆಸ್ ಎನ್ನುವುದು ನಮ್ಮ ಜೀವನದ ನಿರ್ಣಾಯಕ ಭಾಗವಲ್ಲ, ಬದಲಾಗಿ ಫಿಟ್‌ನೆಸ್ ಧರ್ಮಕ್ಕೆ ಸಂಬಂಧಿಸಿದ್ದು’ ಎಂದು ಹೇಳಿದ್ದಾರೆ.
‘ಟ್ರಾನ್ಸೆಂಡ್ ಫಿಟ್‌ನೆಸ್ ಕ್ಲಬ್’ನ ಉದ್ಘಾಟನೆಗೆ ಪತಿ ಅರ್ಬಾಜ್ ಖಾನ್ ಅವರೊಂದಿಗೆ ತೆರಳಿದ್ದ ಮಲೈಕಾ, ‘ನನಗೆ ಫಿಟ್‌ನೆಸ್ ಅಂದರೆ ಧರ್ಮ. ಸುಮ್ಮನೆ ಜಿಮ್‌ಗೆ ಹೋಗಿ ಕಸರತ್ತು ಮಾಡಿ ತೂಕ ಇಳಿಸಿಕೊಳ್ಳುವುದಷ್ಟೇ ಫಿಟ್‌ನೆಸ್ ಅಲ್ಲ’ ಎಂದಿದ್ದಾರೆ. ಫಿಟ್‌ನೆಸ್ ಎನ್ನುವುದು ನನ್ನ ಜೀವನ. ಫಿಟ್‌ನೆಸ್ ಇಲ್ಲದೆ ಜೀವನ ಅಪೂರ್ಣ. ನನ್ನ ಇಡೀ ಜೀವನ ಫಿಟ್‌ನೆಸ್‌ನಿಂದಲೇ ಆವೃತವಾಗಿದೆ.
ಈ ಮೂಲಕ ಜನರಿಗೆ ಫಿಟ್‌ನೆಸ್ ಹಾಗೂ ಉತ್ತಮ ಆರೋಗ್ಯದ ಮಹತ್ವ ಹಾಗೂ ಜಾಗೃತಿಯ ಬಗ್ಗೆ ತಿಳಿಸಲು ಸಂತೋಷವಾಗುತ್ತದೆ’ ಎಂದು ಸಹ ಅವರು ತಿಳಿಸಿದ್ದಾರೆ. ಮಲೈಕಾ, ಶಾರುಖ್ ಖಾನ್ ಅಭಿನಯದ ‘ದಿಲ್ ಸೇ’ ಚಿತ್ರದ ‘ಚೈಯಾ ಚೈಯಾ’ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು.