ಮನೋರಂಜನೆ

ಫೇಸ್ ಬುಕ್ ಅಂದರೆ ಕಂಗನಾ ರಾಣೌತ್ ಗೆ ಅಲರ್ಜಿ

Pinterest LinkedIn Tumblr

Kangana-Ranautಟ್ವಿಟ್ಟರನ್ನಷ್ಟೇ ಹೊಂದಿದ್ದರೂ ಫೇಸ್ ಬುಕ್ ಅಂದರೆ ಈಕೆಗೆ ಅಲರ್ಜಿ. `ಅದೊಂದು ಸಂತೆ’ ಎಂದು ಟೀಕೆಯ ಸ್ಟ್ಯಾಂಪ್ ಅಂಟಿಸುತ್ತಾಳೆ. 2010ರಲ್ಲಿ ಟ್ವೀಟ್ ಮಾಡಿದ ಕಂಗನಾ, ಮತ್ತೆ ಕಾಣಿಸಿಕೊಂಡಿದ್ದು 2013ರ ಅಕ್ಟೋಬರ್ ನಲ್ಲಿ. ಆಮೇಲೆ ಕಂಗನಾ ನಾಪತ್ತೆ. ವಿದ್ಯಾ ಬಾಲನ್ ಕೂಡ ಇವೆರಡು ತಾಣಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆದರೆ, ಅಭಿಮಾನಿಗಳು ಈಕೆಯ ಪುಟ ರಚಿಸಿ ಟ್ವೀಟಿಸುವುದು ಈಕೆಗೂ ಸರಿ ಕಾಣುತ್ತಿಲ್ವಂತೆ. ` ದೇವದಾಸ್’, `ಗುಜಾರಿಸ್’ನಂಥ ಹಿಟ್ ಸಿನಿಮಾ ಕೊಟ್ಟ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಗೆ ಇವೆರಡು ತಾಣಗಳಲ್ಲಿ ಗುರುತಿಸಿಕೊಳ್ಳಲು ಇನ್ನೂ ಮನಸ್ಸೇ ಆಗಿಲ್ಲ.

`ಕಾಮೆಂಟ್ ಮಾಡೋದು ನನ್ನ ವ್ಯಕ್ತಿತ್ವಕ್ಕೆ ಶೋಭೆ ಅಲ್ಲ’ ಅನ್ನೋದು ಸಂಜಯ್ ಸ್ಪಷ್ಟನೆ. ಟ್ವಿಟ್ಟರಿನಲ್ಲಿ ನೀವೆಷ್ಟೇ ಹುಡುಕಿ ರಾಣಿ ಮುಖರ್ಜಿಯ ಖಾತೆಯೂ ಕಾಣ್ಸೋದಿಲ್ಲ. ಗಂಡ ಆದಿತ್ಯ ಚೋಪ್ರಾ ಕೂಡ ರಾಣಿಯ ಟೇಸ್ಟಿಗೆ ತಕ್ಕನಾಗಿ ಸಿಕ್ಕವನೇ!

ನಿಮ್ಗೆ ಗೊತ್ತಾ? `ಹ್ಯಾರಿ ಪಾಟರ್’ ಖ್ಯಾತಿಯ ನಟ ಡೇನಿಯಲ್ ರ್ಯಾಡ್‍ಕ್ಲಿಪ್ ಕೂಡ ಇವೆರಡು ಜಾಲತಾಣಗಳಲ್ಲಿ ಖಾತೆ ಹೊಂದಿಲ್ಲ. `ಎಲ್ಲರಿಗೂ ನೀವು ಸುಲಭವಾಗಿ ಸಿಕ್ಕಿ ಪ್ರತಿಕ್ಷಣ ಏನ್ ಮಾಡ್ತಿದ್ದೀರಿ, ಏನ್ ಮಾಡ್ತಿಲ್ಲ ಅಂತ ಹೇಳೋದಾದ್ರೆ ಖಾಸಗಿ ಬದುಕು ಅಂತ ಇರೋದ್ಯಾಕೆ?’ ಎಂಬುದು ಹ್ಯಾರಿ ಪಾಟರನ ಪ್ರಶ್ನೆ. ಜೇಮ್ಸ್‍ಬಾಂಡ್ ಸರಣಿಯಲ್ಲಿ ಕಾಣಿಸಿ ಕೊಂಡ ಡೇನಿಯಲ್ ಕ್ರೇಗ್ ಕೂಡ ಈ ವಿಚಾರದಲ್ಲಿ ಸನ್ಯಾಸಿಯೇ. ಶೆರ್ಲಾಕ್ ಹೋಮ್ಸನ ಸಿನಿಮಾದಲ್ಲಿ ಡಾ. ವ್ಯಾಟ್ಸನ್ ಆಗಿ ಗಮನ ಸೆಳೆದ ಮಾರ್ಟಿನ್ ? ಫ್ರಿಮನ್‍ಗೂ ಟ್ವಿಟ್ಟರ್- ಫೇಸ್‍ಬುಕ್ ಮೇಲೆ ಸಿಟ್ಟಿದೆ. ಕನ್ನಡದ ಮಟ್ಟಿಗೆ ಬಹುತೇಕ ತಾರೆಗಳು -ಫೇಸ್‍ಬುಕ್‍ನಲ್ಲಿ ದರ್ಶನ ಕೊಡುತ್ತಾರೆ. ಆದರೆ, ಅನೇಕರಿಗೆ ಟ್ವಿಟ್ಟರಿನ ವಿಳಾಸವೇ ಗೊತ್ತಿದ್ದಂತಿಲ್ಲ. ಗೊತ್ತಿಲ್ಲ ಎಂಬ ಕಾರಣಕ್ಕಷ್ಟೇ ಟ್ವಿಟ್ಟರಿನಲ್ಲಿಲ್ಲ ಬಿಟ್ಟರೆ, ಅದರ ಮೇಲೇನೂ ಕೋಪವಿಲ್ಲವೆಂದು ನಾವಂದುಕೊಳ್ಳಬಹುದೇನೋ!

Write A Comment