ಬ್ಯಾಂಕಾಕ್‌ನಲ್ಲಿ ಹಿಂದೂ ದೇವಾಲಯವೊಂದರ ಬಳಿ ಸಂಭವಿಸಿದ ಸ್ಫೋಟ, ಆ ಸ್ಫೋಟದಲ್ಲಿ 27 ಮಂದಿ ಬಲಿಯಾಗಿದ್ದು, ಅನೇಕರು ಗಾಯಗೊಂಡಿದ್ದು ಎಲ್ಲರಿಗೂ ಗೊತ್ತಿದೆ. ಅಂದಹಾಗೆ ಬಾಲಿವುಡ್ ಕಾಲಂ ಸುದ್ದಿಗೂ, ಬ್ಯಾಂಕಾಕ್ ಸ್ಫೋಟಕ್ಕೂ ಎತ್ತಣಿಂದೆತ್ತ ಸಂಬಂಧವಯ್ಯಾ… ಅಂತೀರಾ… ಇದೆ. ಅದಕ್ಕೇ ಈ ಸುದ್ದೀನ ಈ ಕಾಲಂನಲ್ಲಿ ಬರೀತಾ ಇರೋದು… ಬಾಲಿವುಡ್‌ನ ಸುಂದರ ಬೆಡಗಿ ಜೆನಿಲಿಯಾ (ಡಿಸೌಜ) ದೇಶ್‌ಮುಖ್ ಎಂಬ ನಟಿ ಈ ಸ್ಫೋಟ ಸ್ಥಳದಿಂದ ಕೇವಲ ಕೆಲವೇ ಮೀಟರ್ ಅಂತರದಲ್ಲಿದ್ದು, ಅದೃಷ್ಟವಶಾತ್ ಏನೂ ಅಪಾಯವಾಗದೆ ಬಚಾವಾಗಿದ್ದಾಳೆ..!
ನಾನಿದ್ದ ಮಾಲ್‌ನ ಎದುರಿಗೇ ಈ ಸ್ಫೋಟ ಸಂಭವಿಸಿತು. ಕಿವಿಯಾರ ಸ್ಫೋಟದ ಸದ್ದು ಕೇಳಿ ಬೆಚ್ಚಿಬಿದ್ದೆ. ಹಾಗೇ ಅದರಿಂದುಂಟಾದ ಸಾವು-ನೋವುಗಳನ್ನೂ ಕಣ್ಣಾರ ನೋಡಿದೆ. ನಾನೇನೋ ಬಚಾವಾದೆ. ಆದರೆ ಸ್ಫೋಟದಲ್ಲಿ ಜೀವ ಕಳೆದುಕೊಂಡವರು, ಗಾಯಗೊಂಡವರನ್ನು ನೆನಪಿಸಿಕೊಂಡರೆ ಮನಸಿಗೆ ತುಂಬ ನೋವೆನಿಸುತ್ತದೆ.ಅಲ್ಲೇ ಇರುವ ದೇವಸ್ಥಾನದ ಬಳಿ ಇರುವ ಮಾಲ್‌ನಲ್ಲಿ ನಾನಿದ್ದೆ ಎಂದು ಟ್ವೀಟ್ ಮಾಡಿದ್ದಾಳೆ ನಟ ರಿತೇಶ್ ದೇಶ್‌ಮುಖ್ ಪತ್ನಿಯಾಗಿರುವ ಜೆನಿಲಿಯಾ.