ಮನೋರಂಜನೆ

ಐಎಂಡಿಬಿ ರೇಟಿಂಗ್ ನಲ್ಲಿ ಉಪ್ಪಿ2ಗೆ ಪ್ರಥಮ ಸ್ಥಾನ

Pinterest LinkedIn Tumblr

uppi-2-್ಇಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ಓಪನಿಂಗ್ ಪಡೆದ ಉಪೇಂದ್ರ ನಿರ್ದೇಶಿಸಿ ನಟಿಸಿರುವ ಉಪ್ಪಿ2 ಚಿತ್ರಕ್ಕೆ ಇಂಟರ್‍ನೆಟ್ ಮೂವಿ ಡೇಟಾಬೇಸ್(ಐಎಂಡಿಬಿ) 9.7 ರೇಟಿಂಗ್ ನೀಡಿದೆ.

ಐಎಂಡಿಬಿ ಸಂಸ್ಧೆ ಪ್ರಪ್ರಂಚದಾದ್ಯಂತ ಬಿಡುಗಡೆಯಾಗುವ ಪ್ರತಿಯೊಂದು ಚಿತ್ರಕ್ಕೂ ರೇಟಿಂಗ್ ನೀಡುತ್ತದೆ. ಅದೇ ರೀತಿ ಉಪ್ಪಿ2 ಚಿತ್ರ ಕರ್ನಾಟಕದಲ್ಲೇ ಮಾತ್ರವಲ್ಲದೆ, ತೆಲಂಗಾಣ, ಆಂಧ್ರ, ಮುಂಬೈ, ಪುಣೆ ಸೇರಿದಂತೆ ನಾನಾ ಕಡೆ ಬಿಡುಗಡೆಯಾಗಿದ್ದು ಉತ್ತಮ ಓಪನಿಂಗ್ ಪಡೆದುಕೊಂಡಿದೆ.

ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಉಪ್ಪಿ2 ಚಿತ್ರಕ್ಕೆ ಭಾರೀ ಬೇಡಿಕೆ ಬಂದಿದ್ದು, ಚಿತ್ರ ಬಿಡುಗಡೆಯಾಗಿರುವ ಚಿತ್ರಮಂದಿರಗಳಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗಿರುವುದರಿಂದ ಹೆಚ್ಚುವರಿಯಾಗಿ ರಾತ್ರಿ ಶೋಗಳನ್ನು ಪ್ರದರ್ಶಿಸಲಾಗುತ್ತಿದೆ.

ಮತ್ತೊಂದು ಖುಷಿಯ ಸಂಗತಿಯೊಂದರೆ ಐಎಂಡಿಬಿಯ ರೇಟಿಂಗ್ ನಲ್ಲಿ ಉಪ್ಪಿ2 ಚಿತ್ರ ಮೊದಲ ಸ್ಥಾನದಲ್ಲಿದ್ದರೆ, 9.4 ರೇಟಿಂಗ್ ಪಡೆದಿರುವ ರಂಗಿತರಂಗ ಚಿತ್ರ ಮೂರನೇ ಸ್ಥಾನದಲ್ಲಿದೆ.

Write A Comment