ಸ್ಯಾಂಡಲ್ ವುಡ್ ಭಾರೀ ನಿರೀಕ್ಷೆ ಮೂಡಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಐರಾವತ ಚಿತ್ರದ ಹಾಡುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ಮೈಸೂರಿನ ಮಾನಸ ಗಂಗೋತ್ರಿ ಮೈದಾನದಲ್ಲಿ ಕೇಜ್ರಿಸ್ಟಾರ್ ರವಿಚಂದ್ರನ್ ಐರಾವತ ಚಿತ್ರದ ಆಡಿಯೋ ಬಿಡುಗಡೆ ಮಾಡಿದರು. ಚಿತ್ರರಂಗದ ತಾರಾಮಣಿಗಳು ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಸಂದೇಶ್ ನಾಗರಾಜ್ ನಿರ್ಮಾಣದಲ್ಲಿ ತಯಾರಾಗಿರುವ ಚಿತ್ರವನ್ನು ಅದ್ಧೂರಿ ಚಿತ್ರಗಳ ನಿರ್ದೇಶಕ ಎ.ಪಿ ಅರ್ಜನ್ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ವಿ. ಹರಿಕೃಷ್ಣರ ಸಂಗೀತವಿದೆ.
ಚಿತ್ರದಲ್ಲಿ ದರ್ಶನ್ ಗೆ ನಾಯಕಿಯಾಗಿ ಉರ್ವಶಿ ರೌಟೇಲ ಅಭಿನಯಿಸಿದ್ದಾರೆ. ಅದ್ಧೂರಿ ತಾರಾಗಣದಲ್ಲಿ ಪ್ರಕಾಶ್ ರೈ, ಸಾಧುಕೋಕಿಲಾ, ಅನಂತನಾಗ್ ಇದ್ದಾರೆ.