ಬಾಲಿವುಡ್ ನ ಪ್ರಖ್ಯಾತ ನಟ ಅಮಿತಾಬ್ ಬಚ್ಚನ್ ಹಾಗೂ ದೀಪಿಕಾ ಪಡುಕೋಣೆ ಅಪ್ಪ-ಮಗಳಾಗಿ ನಟಿಸಿದ್ದ ‘ಪಿಕು’ ಚಿತ್ರ ಇದೀಗ ಮತ್ತೊಮ್ಮೆ ಸುದ್ದಿ ಮಾಡಿದೆ.
ಹೌದು. ಕೌಟುಂಬಿಕ ಕಥಾ ಹಂದರವನ್ನು ಹಿಂದಿದ್ದ ‘ಪಿಕು’ ಚಿತ್ರ ಭಾಕ್ಸ್ ಆಫೀಸ್ ಅನ್ನು ಕೋಲೆ ಹೊಡೆಯಲು ಯಶಸ್ವಿಯಾಗಿತ್ತು. ಅಷ್ಟೇ ಅಲ್ಲ, ಅದರ ಜತೆ ಜತೆಗೆ ದೀಪಿಕಾ ಮತ್ತು ಅಮಿತಾಬ್ ನಡುವೆ ವೈಮನಸ್ಸು ಉಂಟಾಗಿದೆ ಎಂಬ ಮಾತೂ ಕೇಳಿ ಬಂದಿತ್ತು.
ಆದರೆ ಶೂಜಿತ್ ಸರ್ಕಾರ್ ನಿರ್ದೇಶನದ ಈ ಚಿತ್ರವೀಗ ಮೆಲ್ಬಾರ್ನ್ನಲ್ಲಿ ಇತ್ತೀಚೆಗೆ ನಡೆದ ಭಾರತೀಯ ಚಿತ್ರೋತ್ಸವದಲ್ಲಿ ‘ಅತ್ಯುತ್ತಮ ಚಿತ್ರ’ ಸೇರಿದಂತೆ ಮೂರು ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಸುದ್ದಿ ಮಾಡಿದೆ. ಅದರಲ್ಲಿಯೂ ಈ ಚಿತ್ರದ ನಿರ್ದೇಶಕ ಶೂಜಿತ್ ಸರ್ಕಾರ್ ಅವರಿಗೆ ‘ಅತ್ಯುತ್ತಮ ನಿರ್ದೇಶಕ’ ಪ್ರಶಸ್ತಿ ಹಾಗೂ ಇರ್ಫಾನ್ ಖಾನ್ ‘ಅತ್ಯುತ್ತಮ ನಟ’ ಪ್ರಶಸ್ತಿ ಲಭಿಸಿದ್ದು ಚಿತ್ರದ ಯಶಸ್ಸಿಗೆ ಮತ್ತೊಂದು ಗರಿ ಮೂಡಿದಂತಾಗಿದೆ.