ಮನೋರಂಜನೆ

‘ಅಜರ್’ದಲ್ಲಿನ ಪಾತ್ರ ತುಂಬಾ ಛಾಲೆಂಜಿಂಗ್: ಪ್ರಾಂಚಿ ದೇಸಾಯಿ

Pinterest LinkedIn Tumblr

prachi-fiಮಾಜಿ ಕ್ರಿಕೆಟಿಗ ಅಜರುದ್ದೀನ್ ಜೀವನಾಧಾರಿತ ಅಜರ್ ಚಿತ್ರದಲ್ಲಿ ನಟ ಇಮ್ರಾನ್ ಹಶ್ಮಿಗೆ ನಾಯಕಿಯಾಗಿ ನಟಿ ಪ್ರಾಂಚಿ ದೇಸಾಯಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಪ್ರಾಂಚಿ ಒಂದು ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದು ನನ್ನ ಪಾತ್ರ ತುಂಬಾನೇ ಛಾಲೆಂಜಿಂಗ್ ಆಗಿದೆ ನಟಿ ಪ್ರಾಂಚಿ ದೇಸಾಯಿ ಹೇಳಿದ್ದಾರೆ.

ಅಂದ್ಹಾಗೆ ಸಿನಿಮಾದಲ್ಲಿ ಪ್ರಾಂಚಿ ದಸಾಯಿ ನಿರ್ವಹಿಸುತ್ತಿರೋದು ಅಜರ್ ಮೊದಲ ಪತ್ನಿ ನೌರಿನ್ ಪಾತ್ರ. ತನ್ನ ಪಾತ್ರದ ಬಗ್ಗೆ ಮಾತನಾಡಿರುವ ಪ್ರಾಂಚಿ ದೇಸಾಯಿ   ಈ ಪಾತ್ರ ನಿರ್ವಹಿಸೋದು ಸ್ವಲ್ಪ ಕಷ್ಟ ಅಂದಿದ್ದಾರೆ. ಯಾಕಂದ್ರೆ ಯಾರೂ ಕೂಡ ಅಜರ್ ಮೊದಲ ಪತ್ನಿ ಬಗ್ಗೆ ಅಷ್ಟೊಂದು ತಿಳಿದುಕೊಂಡಿಲ್ಲ. ಇನ್ನು ನಾನು ಕೂಡ ಈಗಷ್ಟೇ ಅವರ ಬಗ್ಗೆ ಕೇಳಿ ತಿಳಿದುಕೊಂಡಿದ್ದೇನೆ. ಹಾಗಾಗಿ ತೆರೆ ಮೇಲೆ ಅವರ ಪಾತ್ರವನ್ನು ಅಚ್ಚುಕಟ್ಟಾಗಿ ಕಟ್ಟಿಕೊಂಡೋದು ಒಂದು ಸವಾಲೇ ಸರಿ ಎಂದಿದ್ದಾರೆ.

ಇನ್ನು ಈ ಸಿನಿಮಾವನ್ನು ಏಕ್ತಾ ಕಪೂರ್ ನಿರ್ಮಿಸುತ್ತಿದ್ದು, ಟೋನಿ ಡಿಸೋಜಾ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಲಂಡನ್ ನಲ್ಲಿ ನಡೆಯುತ್ತಿದ್ದು, ಶೀಘ್ರವೇ ಪ್ರಾಂಚಿ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದ್ರೆ ಮುಂದಿನ ವರ್ಷ ಮೇ 13 ನರಂದು ಸಿನಿಮಾ ರಿಲೀಸ್ ಆಗಲಿದೆ.

Write A Comment