‘ನೆನಪಿರಲಿ’ ಸಿನಿಮಾ ಮೂಲಕ ಚಂದನವನದಲ್ಲಿ ನೆಲೆಕಂಡುಕೊಂಡ ನಟ ಪ್ರೇಮ್. ಚಾಕಲೇಟ್ ಹೀರೋ ಲುಕ್ ಹೊಂದಿರುವ ಪ್ರೇಮ್ ಸ್ಯಾಂಡಲ್ ವುಡ್ ನಲ್ಲಿ ಲಲ್ವಿ ಸ್ಟಾರ್ ಅಂತಾನೇ ಫೇಮಸ್. ವಯಸ್ಸು 367 ಕಳೆದ್ರೂ ಇಂದಿಗೂ ಪ್ರೇಮ್ ಮಾತ್ತ ಕಾಲೇಜು ಹುಡುಗನಂತೆ ಕಾಣಿಸ್ತಾರೆ. ಇದೇ ಪ್ರೇಮ್ ದಾಂಪತ್ಯಕ್ಕೆ 15 ವರ್ಷದ ಸಂಭ್ರಮ.
ಆಗಸ್ಟ್ 1 ರಂದು ಪ್ರೇಮ ತಮ್ಮ ಮನೆಯಲ್ಲೇ ಕುಟುಂಬದವರೊಂದಿಗೆ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಅತ್ಯಂತ ಸರಳವಾಗಿ ಆಚರಿಸಿಕೊಂಡ್ರು. ಕೆಕ್ ಕತ್ತರಿಸಿ ಪರಸ್ಪರ ಸಿಹಿ ಹಂಚಿಕೊಳ್ಳೋದರೊಂದಿಗೆ ವಿವಾಹದ ಆ ದಿನವನ್ನು ಮೆಲಕು ಹಾಕಿದ್ರು. ಪ್ರೇಮ್ ಜ್ಯೋತಿ ಅವರನ್ನು 14 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಯದ್ದು ಈಗ ಇಬ್ಬರು ಮಕ್ಕಳ ಸುಂದರ ಸಂಸಾರ.
ಇನ್ನು ವಿವಾಹ ವಾರ್ಷಿಕೋತ್ಸವದ ಖುಷಿಯಲ್ಲೇ ಪ್ರೇಮ್ ಹಾಗೂ ಅಮೂಲ್ಯ ಅಭಿನಯದ ಮಳೆ ಸಿನಿಮಾ ಕೂಡ ರಿಲೀಸ್ ರೆಡಿಯಾಗಿದೆ. ಆಗಸ್ಟ್ 8 ರಂದು ಎಲ್ಲೆಡೆ ಮಳೆಯ ಸಿಂಚನವಾಗಲಿದೆ.. ಈಗಾಗಲೇ ಎಲ್ಲೆಡೆ ನಿರೀಕ್ಷೆ ಹೆಚ್ಚಿಸಿರುವ “ಮಳೆ’ ನೋಡಲು ಅಮೂಲ್ಯ ಮತ್ತು ಪ್ರೇಮ್ ಅಭಿಮಾನಿಗಳು ಕಾತರದಲ್ಲಿದ್ದಾರೆ. ಆದ್ರೆ ಎಷ್ಟು ಜೋರಾಗಿ ಸುರಿಯುತ್ತದೇ ಅನ್ನೋದನ್ನು ಕಾದು ನೋಡ್ಬೇಕು.
1 Comment
lovely star prem age is funny