ನವದೆಹಲಿ: ಐದು ವರ್ಷದ ವಿರಾಮದ ನಂತರ ಸಂಜಯ್ ಗುಪ್ತಾ ಅವರ ‘ಜಸ್ಬಾ’ ಸಿನೆಮಾದ ಮೂಲಕ ಬಾಲಿವುಡ್ ಗೆ ಹಿಂದಿರುಗಿರುವ ಐಶ್ವರ್ಯ ರೈ ಬಚ್ಚನ್ ಅವರು ಜಸ್ಬಾ ಸಿನೆಮಾದಲ್ಲಿನ ಅಧ್ಬುತ ಕಲಾವಿದರಿಂದ ನಾನು ವಿರಾಮ ತೆಗೆದುಕೊಂಡಿದ್ದೆ ಎಂದು ಗೊತ್ತಾಗಲೇ ಇಲ್ಲ ಎಂದಿದ್ದಾರೆ.
“ನೀವು ಇನ್ನು ಮುಂದೆ ನನ್ನನ್ನು ಹೆಚ್ಚೆಚ್ಚು ನೋಡಲಿದ್ದೀರಿ” ಎಂದು ಯಾಕಿಷ್ಟು ದಿನ ಸಿನೆಮಾಗಳಿಂದ ದೂರವಿದ್ದಿರಿ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.
ಫ್ಯಾಶನ್ ಕಾರ್ಯಕ್ರಮವೊಂದರಲ್ಲಿ ವಿನ್ಯಾಸಕಾರ ಮನೀಶ್ ಮಲಹೋತ್ರ ಅವರ ಪ್ರತಿನಿಧಿಯಾಗಿ ಐಶ್ವರ್ಯ ಭಾಗವಹಿಸಿದ್ದರು.
“ಜಸ್ಬಾದಲ್ಲಿ ಎಲ್ಲರ ಜೊತೆ ಕೆಲಸ ಮಾಡಲು ಬಹಳ ಚೆನ್ನಾಗಿತ್ತು. ಚಿತ್ರದ ಪಾತ್ರಧಾರಿಗಳೆಲ್ಲಾ ಅದ್ಭುತ. ಇರ್ಫಾನ್ ಖಾನ್ ಅವರಿಂದ ಶಬನಾ ಆಜ್ಮಿಯವರೆಗೆ ಎಲ್ಲರು ಅದ್ಭುತ. ನಾನು ಇಷ್ಟು ದಿನ ವಿರಾಮ ತೆಗೆದುಕೊಂಡಿದ್ದೆ ಎಂದೆನಿಸಲೇ ಇಲ್ಲ” ಎಂದು ಐಶ್ವರ್ಯಾ ಹೇಳಿದ್ದಾರೆ. ಮಗಳು ಆರಾಧ್ಯ ಹುಟ್ಟಿದ ನಂತರ ಐಶ್ವರ್ಯಾ ನಟನೆಯಿಂದ ದೂರ ಉಳಿದಿದ್ದರು.
ಈ ನಟಿ ಇದಕ್ಕೂ ಮೊದಲು ೨೦೧೦ರ ಸಂಜಯ್ ಲೀಲಾ ಭನ್ಸಾಲಿ ಅವರ ‘ಗುಜಾರೀಶ್’ ನಲ್ಲಿ ಕಾಣಿಸಿಕೊಂಡಿದ್ದರು.