ಮನೋರಂಜನೆ

ಅಂಬೇಡ್ಕರ್ ಪತ್ನಿ ರಮಾಬಾಯಿ ಪಾತ್ರದಲ್ಲಿ ಯಜ್ಞಾ ಶೆಟ್ಟಿ

Pinterest LinkedIn Tumblr

Yajna-Shetty-fiಯಜ್ಞಾ ಶೆಟ್ಟಿಗೆ ಅವಕಾಶಗಳು ಕಡಿಮೆಯಾಗಿವೆಯೇ ಎಂಬ ಸಂಶಯ ಆಕೆಯ ಅಭಿಮಾನಿಗಳನ್ನು ಕಾಡುತ್ತಿದೆ. ಹಾಗೇನೂ ಇಲ್ಲ. ಆದರೆ, ಯಜ್ಞಾ ಮಾತ್ರ ಸಖತ್ ಚೂಸಿಯಾಗಿದ್ದಾರೆ.

 

ಹಾಗೆ ನೋಡಿದರೆ, ಯಜ್ಞಾ ಯಾವಾಗಲೂ ಚೂಸಿಯಾಗಿಯೇ ಇದ್ದವರು.

 

ಹೇಗೆಂದರೆ, ಅವರು ಚಿತ್ರರಂಗಕ್ಕೆ ಬಂದು ಏಳು ವರ್ಷಗಳಾಗಿದ್ದು, ಈ ಏಳು ವರ್ಷಗಳಲ್ಲ ಕೇವಲ 14 ಚಿತ್ರಗಳಲ್ಲಿ ನಟಿಸಿದ್ದಾರೆ. ಹಲವು ತರಹದ ಪಾತ್ರಗಳಿಗೆ ತನ್ನನ್ನು ಒಡ್ಡಿಕೊಂಡಿದ್ದ ಯಜ್ಞಾ, ಈಗ ಮೊದಲ ಬಾರಿಗೆ ನೈಜ ಪಾತ್ರವೊಂದನ್ನಾಧರಿಸಿದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದು ಅಂಬೇಡ್ಕರ್ ಅವರ ಪತ್ನಿ ರಮಾಬಾಯಿಯಾಗಿ.

 

ಯಜ್ಞಾಗೆ ಗ್ಲಾಮರ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದು ಹೊಸದೇನಲ್ಲ. ಆದರೆ, ಅವೆಲ್ಲ ಕಾಲ್ಪನಿಕ ಪಾತ್ರಗಳಾಗಿದ್ದವು. ಈಗ ಅವರು ಮೊದಲ ಬಾರಿಗೆ ಒಂದು ನಿಜಜೀವನದ ಪಾತ್ರವೊಂದಕ್ಕೆ ತೆರೆಯ ಮೇಲೆ ರೂಪ ಕೊಡುವುದಕ್ಕೆ ಹೊರಟಿದ್ದಾರೆ. ಈ ಜವಾಬ್ದಾರಿಯನ್ನು ಯಜ್ಞಾ ಹೇಗೆ ನಿಭಾಯಿಸುತಾರೆ ಎಂಬುದು ಚಿತ್ರ ಬಿಡುಗಡೆಯಾದ ಮೇಲಷ್ಟೇ ತಿಳಿಯಲು ಸಾಧ್ಯ.

Write A Comment