ಅರ್ಜುನ್ ಕಪೂರ್ ಮತ್ತು ಸೋನಾಕ್ಷಿ ಸಿನ್ಹಾ ಜೊತೆಯಾಗಿ ನಟಿಸಿದ್ದ ‘ತೇವರ್’ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಹೀನಾಯವಾಗಿ ಸೋತಿದ್ದು ನಿಮಗೆ ಗೊತ್ತೇ ಇದೆ. ಈ ಚಿತ್ರದ ನಂತರ ಅರ್ಜುನ್ ಬೇಡಿಕೆ ಕಳೆದುಕೊಂಡರೂ ಸೋನಾಕ್ಷಿ ಮಾತ್ರ ಸೇಫ್ ಆಗಿದ್ದಾರೆ. ಎ.ಆರ್. ಮುರುಗದಾಸ್ ನಿರ್ದೇಶಿಸಲಿರುವ ‘ಅಕೀರಾ’ ಚಿತ್ರದಲ್ಲಿ ಅವರಿಗೆ ಪ್ರಮುಖ ಪಾತ್ರವಿದೆ. ತಾಜಾ ಮಾಹಿತಿ ಪ್ರಕಾರ, ‘ಫೋರ್ಸ್ 2’ ಚಿತ್ರಕ್ಕೂ ಸೋನಾಕ್ಷಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
2011ರಲ್ಲಿ ತೆರೆಕಂಡ ‘ಪೋರ್ಸ್’ನಲ್ಲಿ ಜಾನ್ ಅಬ್ರಾಹಂ ಅವರಿಗೆ ಜೆನಿಲಿಯಾ ಜೋಡಿಯಾಗಿದ್ದರು. ಈ ಬಾರಿ ಆ ಚಾನ್ಸ್ ಸೋನಾಕ್ಷಿ ಪಾಲಾಗಿದೆ. ಮತ್ತೊಂದು ವಿಶೇಷವೆಂದರೆ, ಅವರಿಗಿಲ್ಲಿ ರಾ ಏಜೆಂಟ್ ಪಾತ್ರವಂತೆ. ‘ಹೇ…. ಪೋರ್ಸ್ 2 ಚಿತ್ರದಲ್ಲಿ ರಾ ಏಜೆಂಟ್ ಪಾತ್ರ ನಿಭಾಯಿಸಲು ಪುಳಕಿತಳಾಗಿದ್ದೇನೆ’ ಎಂದು ಟ್ವಿಟರ್ನಲ್ಲಿ ಖುಷಿ ವ್ಯಕ್ತಪಡಿಸಿದ್ದಾರೆ ಸೋನಾಕ್ಷಿ. ವಿಫುಲ್ ಶಾ ನಿರ್ವಿುಸಲಿರುವ ಈ ಚಿತ್ರಕ್ಕೆ ಅಭಿನಯ್ ಡಿಯೋ ಆಕ್ಷನ್-ಕಟ್ ಹೇಳಲಿದ್ದಾರೆ. ಎಲ್ಲ ಅಂದುಕೊಂಡಂತೆ ನಡೆದರೆ ಸೆಪ್ಟೆಂಬರ್ ವೇಳೆಗೆ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ.