‘ಸೂಪರ್ ಸ್ಟಾರ್’ ರಜನಿಕಾಂತ್ ಅಭಿನಯದ ಮುಂದಿನ ಚಿತ್ರಕ್ಕೆ ನಾಯಕಿ ಯಾರೆಂಬುದು ಇನ್ನು ಪ್ರಶ್ನೆಯಾಗಿಯೇ ಉಳಿದಿದೆ. ಪಾ. ರಂಜಿತ್ ನಿರ್ದೇಶಿಸಲಿರುವ ಈ ಚಿತ್ರಕ್ಕೆ ಈಗಾಗಲೇ ಸಕಲ ಸಿದ್ಧತೆಗಳು ನಡೆದಿವೆ. ಚಿತ್ರೀಕರಣ ಪೂರ್ವ ಕೆಲಸಗಳನ್ನೆಲ್ಲ ಮುಗಿಸಿಕೊಂಡಿರುವ ಚಿತ್ರತಂಡ, ಆಗಸ್ಟ್ ತಿಂಗಳಿನಿಂದ ಚಿತ್ರೀಕರಣ ಶುರು ಮಾಡಲಿದೆ.ಆದರೆ, ಹೀರೋಯಿನ್ ವಿಚಾರದಲ್ಲಿ ಯಾವುದೇ ಸ್ಪಷ್ಟ ಉತ್ತರ ದೊರಕಿಲ್ಲ. ಮೊದಲು ನಯನತಾರಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆನಂತರ, ವಿದ್ಯಾ ಬಾಲನ್, ಕತ್ರಿನಾ ಕೈಫ್ ಹೆಸರುಗಳು ಕೂಡ ಹರಿದಾಡಿದ್ದವು. ಸದ್ಯ ಆ ಸಾಲಿನಲ್ಲಿ ಕೇಳಿಬರುತ್ತಿರುವ ಹೊಸ ಹೆಸರು, ರಾಧಿಕಾ ಆಪ್ಟೆ!
‘ರಕ್ತ ಚರಿತ್ರ’, ‘ಬದ್ಲಾಪುರ್’, ‘ಲಯನ್’ ಸೇರಿದಂತೆ ಬಹುಭಾಷಾ ಚಿತ್ರಗಳಲ್ಲಿ ನಟಿಸಿರುವ ರಾಧಿಕಾ ಅವರನ್ನು ಚಿತ್ರತಂಡ ಸಂರ್ಪಸಿದೆಯಂತೆ. ‘ಈಗಾಗಲೇ ಮೊದಲ ಹಂತದ ಮಾತುಕತೆ ಮುಗಿದಿದೆಯಷ್ಟೇ. ಆದರೆ, ಇನ್ನೂ ಯಾವುದು ಅಂತಿಮಗೊಂಡಿಲ್ಲ’ ಎನ್ನುತ್ತವೆ ಮೂಲಗಳು.