ಮನೋರಂಜನೆ

100 ಕೋಟಿ ಪ್ರಿನ್ಸ್!

Pinterest LinkedIn Tumblr

mahesh‘ಬಾಹುಬಲಿ’ ಹವಾ ಕಮ್ಮಿಯಾಗುವುದನ್ನೇ ಕಾಯುತ್ತಿರುವ ಮಹೇಶ್​ಬಾಬು ನಾಯಕತ್ವದ ‘ಶ್ರೀಮಂತುಡು’ ಆ. 7ಕ್ಕೆ ತೆರೆಕಾಣಲಿದೆ. ಈ ಗ್ಯಾಪ್​ನಲ್ಲಿ ‘ಶ್ರೀಮಂತ’ ಸುದ್ದಿಯೊಂದು ಹೊರಬಿದ್ದಿದೆ. ಅದು, ಮಹೇಶ್ ಬಾಬು ಮುಂದಿನ ಚಿತ್ರದ ಬಜೆಟ್ 100 ಕೋಟಿ ರೂ.ಗಳು!

ನಿರ್ದೇಶಕ ವಿ.ವಿ. ವಿನಾಯಕ್ ‘ಶ್ರೀಮಂತುಡು’ ಆಡಿಯೋ ಬಿಡುಗಡೆ ವೇಳೆ ಈ ಸುದ್ದಿ ನೀಡಿದ್ದಾರೆ. ಈಗಾಗಲೇ ಚಿರಂಜೀವಿ, ಪ್ರಭಾಸ್, ಅಲ್ಲು ಅರ್ಜುನ್, ರಾಮ್ರಣ್, ಜೂ. ಎನ್​ಟಿಆರ್ ಮುಂತಾದ ಸ್ಟಾರ್​ಗಳಿಗೆ ಆಕ್ಷನ್-ಕಟ್ ಹೇಳಿರುವ ವಿನಾಯಕ್, ಈಗ ಮಹೇಶ್ ಬಾಬು ಜೊತೆ ಕೆಲಸ ಮಾಡುವ ಆಸೆ ವ್ಯಕ್ತಪಡಿಸಿದ್ದಾರೆ. ಅದೂ 100 ಕೋಟಿ ರೂ. ಬಜೆಟ್​ನಲ್ಲಿ!! ವಿನಾಯಕ್ ಮಾತಿಗೆ ವೇದಿಕೆಯಲ್ಲಿದ್ದ ಮಹೇಶ್ ಮುಗುಳ್ನಕ್ಕಿದ್ದಾರಷ್ಟೇ. ಅದನ್ನೇ ಸಮ್ಮತಿ ಲಕ್ಷಣ ಎಂದುಕೊಂಡಿದ್ದಾರೆ ಅಭಿಮಾನಿಗಳು. ಒಂದು ವೇಳೆ ‘ಪ್ರಿನ್ಸ್’ ಒಪ್ಪಿಕೊಂಡರೂ ಈ ಚಿತ್ರ ಸೆಟ್ಟೇರುವುದು ಶ್ರೀಕಾಂತ್ ಅಡ್ಡಾಲ ನಿರ್ದೇಶನದ ‘ಬ್ರಹ್ಮೋತ್ಸವಂ’ ಕೆಲಸಗಳು ಮುಗಿದ ನಂತರವಷ್ಟೇ!

Write A Comment