* ಕ್ರೇಜಿ ಫ್ಯಾನ್ಸ್ ಜಾಂತಿ, ಭಾಲ್ಕಿ ತಾಲೂಕು (ಸುಹಾಸಿನಿ, ಚಿನ್ನಿ, ದೀಪು, ಕೀರ್ತಿ)
ಸರ್, ನಿಮ್ಮ ಬಗ್ಗೆ ಇನ್ನಷ್ಟು ಮತ್ತಷ್ಟು ಮಗದಷ್ಟು ತಿಳಿದುಕೊಳ್ಳುವಾಸೆ. ನಿಮ್ಮ ಆತ್ಮಚರಿತ್ರೆ ಯಾವಾಗ ಬರೆಯುತ್ತೀರಿ?
ರವಿ: ಇನ್ನೂ ಸಮಯವಿದೆ…
* ಆಕಾಂಕ್ಷಾ, ಬೆಂಗಳೂರು
‘ಅಪೂರ್ವ’ ಬಿಡುಗಡೆಗೆ ಎದುರಾಗಿರುವ ತೊಡಕಾದರೂ ಏನು?
ರವಿ: ನಿಮಗೆ ಹೊಸ ಅನುಭವ ನೀಡಲು… ಪ್ರಯತ್ನಕ್ಕೆ ಬೇಕಾಗುವಷ್ಟು ಸಮಯ ಕೊಡಬೇಕು.
* ಕೆ.ಜೆ. ರಾಮಪ್ರಸಾದ್, ಕಡೂರು
ನಿಮ್ಮ ನಾಯಕತ್ವದ ‘ಪ್ರೇಮಲೋಕ’ ಚಿತ್ರದಲ್ಲಿ ವಿಷ್ಣುವರ್ಧನ್, ಅಂಬರೀಷ್, ಪ್ರಭಾಕರ್ ಅವರು ನಟಿಸಿದಂತೆ, ತಮ್ಮ ಪುತ್ರ ಮನೋರಂಜನ್ ನಾಯಕತ್ವದ ‘ರಣಧೀರ’ದಲ್ಲಿ ಈಗಿನ ಸ್ಟಾರ್ಗಳಿಂದ ಪಾತ್ರ ಮಾಡಿಸುತ್ತೀರಾ?
ರವಿ: ಕಾದು ನೋಡಿ…
* ರಾಘವೇಂದ್ರ ಕೆ. ನಾಯ್ಕ, ಮಂಡ್ಯ
ಸಿನಿಮಾವೊಂದರ ನಿರ್ವಣ ಆರಂಭವಾಗಿ, ಅದರ ಬಿಡುಗಡೆ ನಿರೀಕ್ಷೆಗಿಂತ ತಡವಾಗುವುದರಿಂದ ಪ್ರೇಕ್ಷಕರಿಗೆ ಅಪಾರ ಬೇಸರವಾಗುತ್ತದೆ. ‘ಮಂಜಿನ ಹನಿ’, ‘ಅಪೂರ್ವ’ ಬಿಡುಗಡೆಗಾಗಿ ಚಾತಕ ಪಕ್ಷಿಯಂತೆ ಕಾದಿರುವ ನಮ್ಮ ಬೇಸರ ನಿಮಗೆ ಅರ್ಥವಾಗುವುದು ಯಾವಾಗ?
ರವಿ: ನನ್ನನ್ನು ನೀವು ಅರ್ಥ ಮಾಡಿಕೊಂಡಾಗ.
* ಅಂಜಲಿ ಕೆ. ಕೊರವರ, ಮುಂಡಗೋಡ
ನಟನೊಬ್ಬ ನಟನೆಗೆ ಇಳಿಯುವ ಮುನ್ನ ಯಾವ್ಯಾವ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಬೇಕು?
ರವಿ: ಶ್ರದ್ಧೆ, ಭಕ್ತಿ, ಗುರಿ, (ಅದೃಷ್ಟ), ಪ್ರಯತ್ನ…
**