ಮನೋರಂಜನೆ

ಆ ರೀತಿಯ ಚಿತ್ರಗಳೆಂದರೆ ಇಷ್ಟ ಅಂತಾಳೆ ಈ ನಟಿ !

Pinterest LinkedIn Tumblr

jakತಮ್ಮ ಹಾಟ್ ಅಭಿನಯದಿಂದ ಅಭಿಮಾನಿಗಳ ಮನ ಸೂರೆಗೊಂಡಿರುವ ಶ್ರೀಲಂಕಾ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್‍ ಇದೀಗ ತಮ್ಮ ಬಯಕೆಯೊಂದನ್ನು ಬಹಿರಂಗಪಡಿಸಿದ್ದಾರೆ.

ಹೌದು. ಪ್ರೀತಿ , ಪ್ರೇಮ, ಪ್ರಣಯದ ಕಥೆಯಿರುವ ಚಿತ್ರಗಳ ಕುರಿತು ನಟಿಯರು ಹೆಚ್ಚಿನ ಆಸಕ್ತಿ ವ್ಯಕ್ತಪಡಿಸುತ್ತಾರೆ. ಆದರೆ ಜಾಕ್ವೆಲಿನ್ ಮಾತ್ರ ತಮಗೆ  ಆಕ್ಷನ್ ಚಿತ್ರಗಳೆಂದರೆ ತುಂಬಾ ಇಷ್ಟ. ಹಾಗಾಗಿ ನಾನು ಆ ರೀತಿಯ ಚಿತ್ರದಲ್ಲಿ ನಟಿಸಲು ಹೆಚ್ಚು ಉತ್ಸುಕಳಾಗಿದ್ದೇನೆ ಎಂದು ತಮ್ಮ ಮನದ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಕೆಲವು ದಿನಗಳ ಹಿಂದೆ ಕಿಕ್ ಚಿತ್ರದಲ್ಲಿ ಕೆಲವೊಂದು ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದ ನಟಿ ಜಾಕ್ವೆಲಿನ್, ಸದ್ಯ ಅಕ್ಷಯ್ ಕುಮಾರ್ ಹಾಗೂ ಸಿದ್ಧಾರ್ಥ್ ಮಲ್ಹೋತ್ರ ಅವರ ಬ್ರದರ್ಸ್ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ತೆರೆಮೇಲೆ ಬರುತ್ತಿದ್ದು  ಈ ಚಿತ್ರದಲ್ಲೂ ಜಾಕ್ವೆಲಿನ್ ಆಕ್ಷನ್ ಪಾತ್ರವನ್ನು ನಿರ್ವಹಿಸುತ್ತಾಳೆ ಎನ್ನಲಾಗಿದೆ. ಜಾಕ್ವೆಲಿನ್ ಹಿಂದಿನಿಂದಲೂ ಕ್ರೀಡಾಪಟು ಆಗಿರುವುದರಿಂದ ಕ್ರೀಡಾಪಟು ವ್ಯಕ್ತಿತ್ವ ತನ್ನಲ್ಲಿದ್ದು, ಆಕ್ಷನ್ ದೃಶ್ಯಗಳಿಗೆ ತಾನು ಹೊಂದಿಕೊಳ್ಳುವುದಾಗಿ ತಿಳಿಸಿರುವ ಜಾಕ್ವೆಲಿನ್ ಈ ಚಿತ್ರದಲ್ಲಿ ಹೇಗೆ ನಟಿಸಿದ್ದಾಳೆ ಎಂಬುದನ್ನು ಕಾಯ್ದು ನೋಡ ಬೇಕಿದೆ.

Write A Comment