ಖ್ಯಾತ ಸ್ಯಾಂಡಲ್ ವುಡ್ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಮಾನ್ಯವಾಗಿ ಕಿರು ತೆರೆಯಲ್ಲಿ ಕಾಣಿಸಿಕೊಳ್ಳುವುದು ಅಪರೂಪ. ಬಹು ವರ್ಷಗಳ ಹಿಂದೆ ರಿಯಾಲಿಟಿ ಷೋ ಒಂದರಲ್ಲಿ ಕಾಣಿಸಿಕೊಂಡಿದ್ದ ಅವರು ಇಂದು ಮತ್ತೆ ಕಿರು ತೆರೆ ಮೇಲೆ ಬರಲಿದ್ದಾರೆ.
ಕಲರ್ಸ್ ವಾಹಿನಿಯಲ್ಲಿ ಸೃಜನ್ ಲೋಕೇಶ್ ನಡೆಸಿಕೊಡುವ ‘ಮಜಾ ಟಾಕೀಸ್’ ನಲ್ಲಿ ದರ್ಶನ್ ಪಾಲ್ಗೊಳ್ಳಲಿದ್ದಾರೆ. ಅವರೊಂದಿಗೆ ಮತ್ತೊಬ್ಬ ನಟ ಬುಲೆಟ್ ಪ್ರಕಾಶ್ ಸಹ ‘ಮಜಾ ಟಾಕೀಸ್’ ನಲ್ಲಿ ಭಾಗವಹಿಸುತ್ತಿದ್ದಾರೆ. ಇದರಲ್ಲಿ ಎಂದಿನಂತೆ ಇಂದ್ರಜಿತ್ ಲಂಕೇಶ್ ಸಹ ಇರಲಿದ್ದಾರೆ.
ದರ್ಶನ್ ಅವರು ಬಾಲ್ಯದಿಂದಲೂ ಸೃಜನ್ ಲೋಕೇಶ್ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದು, ಇಂದಿನ ‘ಮಜಾ ಟಾಕೀಸ್’ ನಲ್ಲಿ ಇವರಿಬ್ಬರ ಹಿಂದಿನ ಅನುಭವಗಳನ್ನು ಮೆಲುಕು ಹಾಕಿಕೊಳ್ಳುವ ಸಾಧ್ಯತೆಗಳಿವೆ. ಬುಲೆಟ್ ಪ್ರಕಾಶ್ ಸಹ ಈ ಇಬ್ಬರಿಗೂ ಅತ್ಮೀಯರಾಗಿದ್ದು, ಇಂದಿನ ‘ಮಜಾ ಟಾಕೀಸ್’ ವೀಕ್ಷಕರನ್ನು ಮೋಡಿ ಮಾಡಲಿದೆ ಎನ್ನಲಾಗಿದೆ. ಕಲರ್ಸ್ ವಾಹಿನಿಯಲ್ಲಿ ಈ ಕಾರ್ಯಕ್ರಮ ಇಂದು ಹಾಗೂ ನಾಳೆ (ಭಾನುವಾರ) ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.