ಮನೋರಂಜನೆ

ಉಪ್ಪಿ-2 ಒಂದೇ ದಿನ 1250 ಶೋ; 9 ಕೋಟಿ ಗಳಿಕೆಯ ದಾಖಲೆ?

Pinterest LinkedIn Tumblr

Upendra-(2)ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಉಪ್ಪಿ-2 ಸಿನಿಮಾ 250 ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿದ್ದು, ಮೊದಲ ದಿನವೇ 9 ಕೋಟಿ ರೂಪಾಯಿ (ಉಪ್ಪಿಟ್ಟು: ಫುಡ್ ಫಾರ್ ತಾಟು ಮತ್ತು ಥಾಟು!) ಗಳಿಕೆ ಕಂಡಿರುವುದಾಗಿ ಸ್ವತಃ ನಟ ಉಪೇಂದ್ರ ಅವರು ಟಿವಿ9 ಮಾಧ್ಯಮಕ್ಕೆ ತಿಳಿಸಿರುವುದಾಗಿ ವರದಿಯಾಗಿದೆ. ಆದರೆ ಚಿತ್ರ ಎಷ್ಟು ಗಳಿಸಿದೆ ಎಂಬ ನಿಖರ ಮಾಹಿತಿ ಇನ್ನಷ್ಟೇ ಲಭಿಸಬೇಕಾಗಿದೆ ಎಂದು ಕೆಲವು ಮೂಲಗಳು ತಿಳಿಸಿವೆ.

ಶುಕ್ರವಾರ ಉಪೇಂದ್ರ ಅವರ ಬಹುನಿರೀಕ್ಷಿತ ಉಪ್ಪಿ-2 ಸಿನಿಮಾ ರಿಲೀಸ್ ಆಗಿತ್ತು. ಉಪ್ಪಿ ಅಭಿಮಾನಿಗಳು ಪಟಾಕಿ ಸಿಡಿಸಿ, ಉಪ್ಪಿಟ್ಟು ಹಂಚಿ ಸಂಭ್ರಮಿಸಿದ್ದರು. ನಿನ್ನೆ ಒಂದೇ ದಿನ ಉಪ್ಪಿ-2 1,250 ಭರ್ಜರಿ ಪ್ರದರ್ಶನ ಕಂಡಿದೆ. ಮೊದಲ ದಿನವೇ 9 ಕೋಟಿ ಕಲೆಕ್ಷನ್ ಕಾಣುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಬರೆದಿದೆ ಎನ್ನಲಾಗುತ್ತಿದೆ. ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳಲ್ಲಿ ಉಪ್ಪಿ-2 ಐದು ಪ್ರದರ್ಶನಗಳನ್ನು ಕಂಡಿದೆ.

ಉಪೇಂದ್ರ ಸಿನಿಮಾದ ಮುಂದುವರಿದ ಭಾಗ ಎಂಬಂತೆ ಬದಲಾವಣೆ ಜಗದ ನಿಯಮ ಎಂಬಂತೆ ನಾನು, ನೀನು ಎಂಬ ಮೂಲಕ ಪ್ರೇಕ್ಷಕರ ತಲೆಗೆ ಉಪ್ಪಿ ಹುಳ ಬಿಟ್ಟಿದ್ದಾರೆ. ಎಂದಿನಂತೆ ಉಪ್ಪಿ ಅಭಿಮಾನಿಗಳು ಉಪ್ಪಿ-2 ಅನ್ನು ಅಪ್ಪಿಕೊಂಡಿದ್ದಾರೆ ಎನ್ನುವ ಮೂಲಕ ಉಪ್ಪಿಗಿಂತ ರುಚಿ ಬೇರೆ ಇಲ್ಲ…ಎಂಬುದು ಮತ್ತೊಮ್ಮೆ ಸಾಬೀತಾದಂತಾಗಿದೆ.

ಪ್ರಿಯಾಂಕಾ ಉಪೇಂದ್ರ ನಿರ್ಮಾಣದ ಉಪ್ಪಿ-2 ಸಿನಿಮಾದ ತಾರಾಗಣದಲ್ಲಿ ಉಪೇಂದ್ರ, ಕ್ರಿಸ್ಟೀನಾ, ಪಾರುಲ್ ಯಾದವ್, ಟೆನ್ನಿಸ್ ಕೃಷ್ಣ, ಶೋಭರಾಜ್, ಬ್ಯಾಂಕ್ ಜನಾರ್ದನ್ ಮತ್ತಿತರರು ಇದ್ದಾರೆ. ಚಿತ್ರಕ್ಕೆ ಗುರುಕಿರಣ್ ಸಂಗೀತ.
-ಉದಯವಾಣಿ

Write A Comment