ಮನೋರಂಜನೆ

ನಮ್ಮ ಹಿತಾಸಕ್ತಿಗಾಗಿ ಉತ್ತಮ ಬಾಂಧವ್ಯ ಅಗತ್ಯ: ನವಾಜ್ ಶರೀಫ್

Pinterest LinkedIn Tumblr

Nawaz-Sharif_APಇಸ್ಲಾಮಾಬಾದ್: ೬೯ನೆ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಭಾರತಕ್ಕೆ ಶುಭ ಸಂದೇಶ ನೀಡಿದ್ದು, “ಎರಡು ದೇಶಗಳ ನಡುವಿನ ಒಳ್ಳೆಯ ಬಾಂಧವ್ಯ” ನವದೆಹಲಿ ಮತ್ತು ಇಸ್ಲಾಮಾಬಾದ್ ಗೆ ಸಹಕಾರಿ ಎಂದಿದ್ದಾರೆ.

“ಮಾತುಕತೆಯ ಮೂಲಕ ಎರಡು ದೇಶಗಳ ಪರಸ್ಪರ ಭಿನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ನಾವು ಸಂಪೂರ್ಣ ಭರವಸೆ ಇಟ್ಟಿದ್ದೇವೆ” ಎಂದು ಸಂದೇಶದಲ್ಲಿ ತಿಳಿಸಿದ್ದಾರೆ.

“ಎರಡು ದೇಶಗಳ ಪರಸ್ಪರ ಹಿತಾಸಕ್ತಿಗಾಗಿ ಒಳ್ಳೆಯ ಸಂಬಂಧ ಮತ್ತು ಉತ್ತಮ ಗೆಳೆತನ ಇರಬೇಕು” ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನದ ರಾಷ್ಟ್ರಪತಿ ಮಮ್ನೂನ್ ಹುಸೇನ್ ಕೂಡ ಈ ಸಂದರ್ಭದಲ್ಲಿ ಭಾರತಕ್ಕೆ ಶುಭ ಸಂದೇಶ ನೀಡಿದ್ದಾರೆ. ಇಂದು ಭಾರತ ೬೯ನೆ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದರೆ, ನೆನ್ನೆ ಪಾಕಿಸ್ತಾನ ಕೂಡ ತನ್ನ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿಕೊಂಡಿತ್ತು. ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶುಭ ಕೋರಿದ್ದರು.

Write A Comment