ಮನೋರಂಜನೆ

ಬೆಳ್ಳಿ ಪದಕ ಖಚಿತಪಡಿಸಿದ ಸೈನಾ: ವಿಶ್ವ ಬ್ಯಾಡ್ಮಿಂಟನ್ ಫೈನಲ್ ತಲುಪಿದ ಭಾರತದ ಮೊದಲ ಆಟಗಾರ್ತಿ

Pinterest LinkedIn Tumblr

saina-nehwal12ಜಕಾರ್ತ: ವಿಶ್ವದ ಎರಡನೇ ಶ್ರೇಯಾಂಕಿತೆ ಸೈನಾ ನೆಹ್ವಾಲ್ ಇದೇ ಮೊದಲ ಬಾರಿಗೆ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್‍ನ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಅಂತಿಮ ಸುತ್ತು ಪ್ರವೇಶಿಸಿದ್ದಾರೆ.

ಈಗಷ್ಟೇ ಸ್ವಲ್ಪ ಹೊತ್ತಿಗೆ ಮೊದಲು ಮುಗಿದ ಪಂದ್ಯದಲ್ಲಿ ಸೈನಾ ನೆಹ್ವಾಲ್, ಇಂಡೋನೇಷಿಯಾದ ಲಿಂಡವೇಣಿ ಫನೆತ್ರಿ ಅವರನ್ನು 21-17, 21-17 ನೇರ ಸೆಟ್ ಗಳಿಂದ ಪರಾಭವಗೊಳಿಸಿದರು.ಈ ಮೂಲಕ ಭಾರತಕ್ಕೆ ಬೆಳ್ಳಿ ಪದಕ ಸಿಗುವುದು ಖಚಿತವಾಗಿದೆ.

ಅವರು ನಾಳೆ, ವಿಶ್ವದ ನಂಬರ್ ಒನ್ ಆಟಗಾರ್ತಿ ಕರೋಲಿನಾ ಮರಿನ್ ಅವರ ವಿರುದ್ಧ ಆಡಲಿದ್ದಾರೆ.

Write A Comment