ಶಾಹಿದ್ ಕಪೂರ್ ಹಾಗೂ ಆಲಿಯಾ ಭ್ ಅಭಿನಯದ ಶಾಂದಾರ್ ಸಿನಿಮಾ ಈಗಾಗಲೇ ಬಾಲಿವುಡ್ ಅಂಗಳದಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟಿಹಾಕಿದೆ. ಈಗಾಗಲೇ ರಿಲೀಸ್ ಆಗಿರುವ ಟ್ರೇಲರ್ ಸಿನಿಮಾದ ಬಗ್ಗೆ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.
ಈಗಾಗಲೇ ಬಿಡುಗಡೆಯಾಗಿರುವ ಶಾಂದರಾ ಸಿನಿಮಾದಲ್ಲಿ ಆಲಿಯಾ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದು, ಈ ಸೀನ್ ಗಾಗಿ ನಾನು ಸಾಕಷ್ಟು ಕಷ್ಟಪಟ್ಟಿದ್ದೇನೆ ಅಂತಾ ಆಲಿಯಾ ಹೇಳಿದ್ದಾರೆ. ಮೊದಲ ಬಾರಿಗೆ ಆಲಿಯಾ ಬಿಕಿನಿಯಲ್ಲಿ ಕಾಣಿಸಿಕೊಂಡಿರೋದರಿಂದ ಅದಕ್ಕಾಗಿ ಆಲಿಯಾ ಸಿಕ್ಕಾಪಟ್ಟೆ ಕಸರತ್ತು ಮಾಡಿದ್ದಾರಂತೆ. ಅದಕ್ಕಾಗಿ ಆಲಿಯಾ ಡಯೆಟ್ ಕೂಡ ಮಾಡಿದ್ದಾರಂತೆ. ಇನ್ನು ಪಿಂಕ್ ಬಣ್ಣದ ಬಿಕಿನಿಯಲ್ಲಿ ಕಾಣಿಸಿಕೊಂಡಿರುವ ಆಲಿಯಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ಶಾಂದಾರ್ ಸಿನಿಮಾವನ್ನು ವಿಕಾಸ್ ಬಹಲ್ ನಿರ್ದೇಶಿಸಿದ್ದು, ಫ್ಯಾಂಟಮ್ ಸಿನಿಮಾ ತಂಡವೇ ಇದರ ನಿರ್ಮಾಣದ ಜವಬ್ದಾರಿ ಹೊತ್ತುಕೊಂಡಿದೆ. ಅಕ್ಟೋಬರ್ 22 ರಂದು ಈ ಸಿನಿಮಾ ಪ್ರೇಕ್ಷಕರೆದುರಿಗೆ ಬರಲಿದೆ.