ಮನೋರಂಜನೆ

ನಟ ದರ್ಶನ್ ರ ಜಗ್ಗುದಾದಾನಿಗೆ ಟಾಲಿವುಡ್​ನ ‘ಮಿರಪಕಾಯ್’ ದೀಕ್ಷಾ ಸೇಠ್​

Pinterest LinkedIn Tumblr

arjunನಟ ದರ್ಶನ್ ‘ಮಿಸ್ಟರ್ ಐರಾವತ’ ಚಿತ್ರವನ್ನು ಮುಗಿಸಿದ್ದಾರೆ. ಅದರ ಚಿತ್ರೀಕರಣೋತ್ತರ ಕೆಲಸಗಳಿಗೆ ನಿರ್ದೇಶಕ ಎ.ಪಿ. ಅರ್ಜುನ್ ಚಾಲನೆ ನೀಡಿದ್ದಾರೆ. ಈ ಮಧ್ಯೆ ನಿಂತುಹೋಗಿದ್ದ ‘ವಿರಾಟ್’ ಶೂಟಿಂಗ್​ನಲ್ಲೂ ದರ್ಶನ್ ಭಾಗಿಯಾಗಿದ್ದರು. ಸದ್ಯ ಎಲ್ಲರ ಚಿತ್ತ ‘ಜಗ್ಗುದಾದಾ’ ಕಡೆಗಿದೆ. ರಾಘವೇಂದ್ರ ಹೆಗಡೆ ಮೊದಲ ಬಾರಿಗೆ ಆಕ್ಷನ್-ಕಟ್ ಹೇಳುತ್ತಿರುವ ಈ ಚಿತ್ರಕ್ಕೆ ದರ್ಶನ್ ಹುಟ್ಟುಹಬ್ಬದಂದು ಮುಹೂರ್ತ ಮಾಡಲಾಗಿತ್ತು. ಆ ಬಳಿಕ ಹೆಚ್ಚೇನೂ ಮಾಹಿತಿ ಹೊರಬಂದಿರಲಿಲ್ಲ. ಇದೀಗ, ನಾಯಕಿ ಆಯ್ಕೆ ಮುಖೇನ ಸಣ್ಣಗೆ ಸೌಂಡು ಮಾಡುತ್ತಿದ್ದಾನೆ ‘ಜಗ್ಗುದಾದಾ’.

ಟಾಲಿವುಡ್​ನ ‘ಮಿರಪಕಾಯ್’ ದೀಕ್ಷಾ ಸೇಠ್​ಗೆ ದರ್ಶನ್ ಜೊತೆ ಡ್ಯುಯೆಟ್ ಹಾಡುವ ಅವಕಾಶ ಸಿಕ್ಕಿದೆ. ಮುಂದಿನ ವಾರದಿಂದ ಚಿತ್ರೀಕರಣ ಶುರು ಮಾಡಲು ನಿರ್ದೇಶಕರು ಮುಂಬೈನಲ್ಲಿ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಇನ್ನು, ದೀಕ್ಷಾ ಸೇಠ್ ಬಗ್ಗೆ ಗೊತ್ತಿಲ್ಲದವರು ತೆಲುಗಿನ ‘ಮಿರಪಕಾಯ್’, ‘ನಿಪ್ಪು’ ಚಿತ್ರಗಳನ್ನು ನೆನಪು ಮಾಡಿಕೊಳ್ಳಬೇಕು. ಆ ಚಿತ್ರಗಳಲ್ಲಿ ರವಿತೇಜ ಜತೆ ನಟಿಸಿದ್ದ ಈ ಬೆಡಗಿ, ವಿಕ್ರಮ್ ಅವರೊಂದಿಗೆ ತಮಿಳಿನಲ್ಲಿ ‘ರಾಜಪಟ್ಟೈ’ ಚಿತ್ರದಲ್ಲೂ ನಟಿಸಿದ್ದಾರೆ. ಸೈಫ್ ಅಲಿ ಖಾನ್ ನಿರ್ವಣದ ‘ಲೇಕರ್ ಹಮ್ ದೀವಾನಾ ದಿಲ್’ ಚಿತ್ರದ ಮೂಲಕ ಬಾಲಿವುಡ್​ಗೂ ಪಾದ ಬೆಳಿಸಿದ್ದರು ದೀಕ್ಷಾ. ಇದೀಗ ದರ್ಶನ್ ಹೈಟ್​ಗೆ ತಕ್ಕಂತಿರುವ ಅವರನ್ನು ನಿರ್ದೇಶಕ ರಾಘವೇಂದ್ರ ಓಕೆ ಮಾಡಿದ್ದಾರೆ.

ಇದಕ್ಕೂ ಮೊದಲು ‘ಮುಂಗಾರು ಮಳೆ 2’ ನಾಯಕಿ ನೇಹಾ ಶೆಟ್ಟಿಗೆ ‘ಜಗ್ಗುದಾದಾ’ ಚಿತ್ರದಲ್ಲಿ ನಟಿಸುವ ಅವಕಾಶ ಒದಗಿಬಂದಿತ್ತಾದರೂ, ಕಾರಣಾಂತರ ‘ನೋ’ ಅಂದಿದ್ದರಿಂದ ನಿರ್ದೇಶಕರು ಬೇರೆಯವರ ಹುಡುಕಾಟದಲ್ಲಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು.

Write A Comment