ಮನೋರಂಜನೆ

ಶೀಘ್ರದಲ್ಲೇ ಡಿ’ಗ್ಲಾಮರ್ ಗೆ ಬ್ರೇಕ್ ಹಾಕಿ ಜೀರೋ ಸೈಜ್ ಗೆ ಅನುಷ್ಕಾ ಶೆಟ್ಟಿ

Pinterest LinkedIn Tumblr

anushkaಗ್ಲಾಮರ್ ಮತ್ತು ಡಿ’ಗ್ಲಾಮರ್ ಎರಡೂ ಬಗೆಯ ಪಾತ್ರಗಳಲ್ಲಿ ಸೈ ಎನಿಸಿಕೊಂಡವರು ನಟಿ ಅನುಷ್ಕಾ ಶೆಟ್ಟಿ. ‘ಬಾಹುಬಲಿ’ ಚಿತ್ರದಲ್ಲಿ ಸಂಪೂರ್ಣ ಡಿ’ಗ್ಲಾಮರಸ್ ಪಾತ್ರ ಅವರ ಪಾಲಾಗಿತ್ತು. ಸೆ. 4ರಂದು ತೆರೆಗೆ ಬರಲು ರೆಡಿಯಾಗಿರುವ ‘ರುದ್ರಮದೇವಿ’ ಕೂಡ ಐತಿಹಾಸಿಕ ಚಿತ್ರವಾಗಿರುವುದರಿಂದ ಇಲ್ಲಿಯೂ ಥಳುಕು ಬಳುಕಿಗೆ ಹೆಚ್ಚಿನ ಅವಕಾಶವಿಲ್ಲ. ಇದರಿಂದ ಅನುಷ್ಕಾ ಅಭಿಮಾನಿಗಳು ಕೊಂಚ ಬೇಸರಗೊಂಡಿರಲೂಬಹುದು. ಆದರೆ ಆ ಬೇಸರಕ್ಕೆ ಶೀಘ್ರದಲ್ಲೇ ಬ್ರೇಕ್ ಹಾಕಲಿದ್ದಾರೆ ಅನುಷ್ಕಾ. ಪ್ರಕಾಶ್ ಕೊವೆಲಮುದಿ ನಿರ್ದೇಶನದ ‘ಸೈಜ್ ಜೀರೋ’ ಚಿತ್ರದಲ್ಲಿ ಹಿಂದೆಂದಿಗಿಂತಲೂ ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ ಅವರು.

ಎಷ್ಟೋ ಹೆಣ್ಣುಮಕ್ಕಳಿಗೆ ತಲೆನೋವಾಗಿ ಪರಿಣಮಿಸಿರುವ ದೇಹ ತೂಕದ ಸಮಸ್ಯೆಯೇ ‘ಸೈಜ್..’ನ ಮುಖ್ಯ ವಿಷಯ. ಇದಕ್ಕಾಗಿ 20 ಕಿಗ್ರಾಂ ತೂಕ ಹೆಚ್ಚಿಸಿಕೊಂಡಿದ್ದಾರಂತೆ ಅನುಷ್ಕಾ. ಹಾಗಂತ ಇಡೀ ಚಿತ್ರದಲ್ಲಿ ದಢೂತಿಯಾಗಿ ಪ್ರೇಕ್ಷಕರಿಗೆ ದರ್ಶನ ನೀಡಲಿದ್ದಾರೆ ಎಂದುಕೊಳ್ಳಬೇಡಿ. ಅದು ಕೆಲವು ದೃಶ್ಯಗಳಲ್ಲಿ ಮಾತ್ರ. ಇನ್ನುಳಿದ ದೃಶ್ಯಗಳಲ್ಲಿ ಸ್ಲಿಮ್ ಆಗಿಯೇ ಕಾಣಿಸಿಕೊಳ್ಳಲಿದ್ದಾರಂತೆ. ಅಂದರೆ ಅವರದು ಇಲ್ಲಿ ಎರಡು ಭಿನ್ನ ಛಾಯೆಯಳ್ಳ ಪಾತ್ರ. ಫಿಟ್​ನೆಸ್ ತರಬೇತುದಾರನ ಪಾತ್ರಕ್ಕೆ ಬಣ್ಣ ಹಚ್ಚಿದಾರೆ ನಾಯಕ ಆರ್ಯ. ತೆಲುಗು ಮತ್ತು ತಮಿಳಿನಲ್ಲಿ ತಯಾರಾಗಿರುವ ‘ಸೈಜ್..’ನ ಟೈಟಲ್ ಲೋಗೊ ಮೊನ್ನೆ ತಾನೆ ಬಿಡುಗಡೆಯಾಗಿದೆ. ಅ. 2ರಂದು ಚಿತ್ರ ತೆರೆಗೆ ಬರಲಿದೆ. ಖ್ಯಾತ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ‘ಸೈಜ್…’ ಹಾಡುಗಳಿಗೆ ಸ್ವರ ಸಂಯೋಜಿಸಿದ್ದಾರೆ.

Write A Comment