ಮನೋರಂಜನೆ

ಲೂಸ್ ಮಾದ’ ಯೋಗೀಶ್ ಗಾನಯೋಗಿಯಲ್ಲಿ ಗಾನ

Pinterest LinkedIn Tumblr

madaಸ್ಯಾಂಡಲ್​ವುಡ್​ನಲ್ಲಿ ನಾಯಕರು ಗಾಯಕರಾಗುತ್ತಿರುವುದು ಸಾಮಾನ್ಯ ಸಂಗತಿಯಾಗಿಬಿಟ್ಟಿದೆ! ತಮ್ಮ ಚಿತ್ರವಲ್ಲದೇ ಬೇರೆ ಹೀರೋಗಳಿಗೂ ಪುನೀತ್ ರಾಜ್​ಕುಮಾರ್ ಧ್ವನಿ ನೀಡುತ್ತ ಟಾಪ್ ಫಾಮರ್್​ನಲ್ಲಿದ್ದಾರೆ. ಶರಣ್ ‘ವಜ್ರಕಾಯ’ದಲ್ಲಿ ‘ತೂಕತು ಗಡಬಡ ಲಡಕಿ’ ಎಂದಿದ್ದಲ್ಲದೇ, ‘ಬುಲೆಟ್ ಬಸ್ಯಾ’ದಲ್ಲಿ ‘ಕಾಲ್ ಕೆಜಿ ಕಡ್ಲೇಕಾಯ್…’ ಅಂತ ಸೌಂಡ್ ಮಾಡಿದ್ದರು. ‘ರಾಟೆ’ಗಾಗಿ ಸುದೀಪ್ ‘ಜೋಡ್ಹಕ್ಕಿ ಗೂಡ್ ಕಟ್ಕಂತಾವೆ..’ ಅಂತ ಮಾಧುರ್ಯ ಮೆರೆದಿದ್ದರು. ‘ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ’ಗಾಗಿ ಯಶ್ ಹಾಡಿದ ‘ಹಂಗೋ ಹಿಂಗೋ.. ಹೆಂಗೋ ಇದ್ದೆ…’ ಹಾಡು ಇನ್ನೂ ಕಿವಿಯಲ್ಲಿದೆ.

ಇದೀಗ ‘ಲೂಸ್ ಮಾದ’ ಯೋಗೀಶ್ ಕೂಡ ತಮ್ಮ ಮುಂದಿನ ಚಿತ್ರ ‘ಕೋಲಾರ’ಕ್ಕಾಗಿ ಹೆಡ್​ಫೋನ್ ಹಾಕಿಕೊಂಡು ಮೈಕ್ ಮುಂದೆ ನಿಂತಿದ್ದಾರೆ. ಅಂದ್ಹಾಗೆ, ಅವರೇನು ಇದೇ ಮೊದಲ ಬಾರಿಗೆ ಹಾಡು ಹೇಳಿದ್ದಲ್ಲ. 3 ವರ್ಷಗಳ ಹಿಂದೆ ‘ಕಾಲಾಯಾ ತಸ್ಮೈ ನಮಃ’ ಚಿತ್ರದ ‘ಖಾಲಿ ರೋಡು..’ ಗೀತೆಯನ್ನು ಸಖತ್ ಜೋಶ್​ನಿಂದಲೇ ಹಾಡಿದ್ದರು ಅವರು. ಬಹುದಿನಗಳ ನಂತರ ಈಗ ‘ಕೋಲಾರ’ದಲ್ಲೊಂದು ಹಾಡು ಹೇಳಿದ್ದಾರೆ. ‘ಕೋಲಾರ ಚಿನ್ನದ ನಾಡು.. ಇಲ್ಲಿ ಚಿನ್ನಕ್ಕೆ ಬರ ಇಲ್ಲ.. ಅನ್ನ ಸಿಗೋದಿಲ್ಲ..’ ಅಂತ ಶುರುವಾಗುವ

ಈ ಹಾಡಿಗೆ ಸಖತ್ ರಗಡ್ ಶೈಲಿಯಲ್ಲೇ ಧ್ವನಿ ನೀಡಿದ್ದಾರೆ ಅವರು.

ಮಹೇಶ್​ಕುಮಾರ್ ಎಂಬುವರು ತಂಗಂ ಹೆಸರಿನ ರೌಡಿಯೊಬ್ಬನ ಕಥೆಯಿಟ್ಟುಕೊಂಡು ‘ಕೋಲಾರ’ ಚಿತ್ರವನ್ನು ನಿರ್ದೇಶಿಸಿದ್ದಾರೆ. ‘ಚಿನ್ನದ ನೆಲದಲ್ಲಿ ರಕ್ತದ ಓಕುಳಿ’ ಎಂಬ ಟ್ಯಾಗ್​ಲೈನ್ ಇರುವ ‘ಕೋಲಾರ’ಕ್ಕೆ ರಮೇಶ್ ಮತ್ತು ಲಕ್ಷ್ಮೀನಾರಾಯಣ ಗೌಡ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ. ಇಲ್ಲಿ ಯೋಗಿ ಜತೆಗೆ ಕಲಾವಿದರ ದಂಡೇ ಇದೆ. ಶೋಭರಾಜ್, ತಿಲಕ್, ರಾಜ್, ಅಕ್ಷಯ್, ತಮಿಳಿನ ರಾಜೇಂದ್ರನ್, ಸಂಪತ್​ಕುಮಾರ್ ಚಿತ್ರದಲ್ಲಿ ನಟಿಸಿದ್ದಾರೆ.

Write A Comment