ಗಾಲೆ, ಆ.12: ಲಂಕಾದ ಘಟಾನುಘಟಿ ಬ್ಯಾಟ್ಸ್‌ಮನ್‌ಗಳು ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಸ್ಪಿನ್ ಮೋಡಿ ಎದುರು ಶರಣಾಗಿ ಮೊದಲ ಇನ್ನಿಂಗ್ಸ್‌ನಲ್ಲಿ 183 ಕ್ಕೆ ಅಲೌಟಾಗಿದೆ.
ಲಂಕಾದ ತಂಡದ ಪರ ನಾಯಕ ಅಂಜಲೋಮ್ಯಾಥ್ಯೂಸ್ (64), ದಿನೇಶ್ ಚಾಂಡಿಮಲ್ (59) ಹಾಗೂ ರಂಗನಾಹೆರಾತ್ (23) ರನ್ನು ಬಿಟ್ಟರೆ ಉಳಿದ ಯಾವ ಬ್ಯಾಟ್ಸ್‌ಮನ್‌ಗಳು ಎರಡಂಕಿ ದಾಟುವಲ್ಲಿ ಸಫಲರಾಗಲಿಲ್ಲ. ಭಾರತ ತಂಡದ ಪರ ರವಿಚಂದ್ರನ್ ಅಶ್ವಿನ್ 6 ವಿಕೆಟ್ ಕಬಳಿಸಿದರೆ, ಅಮಿತ್‌ಮಿಶ್ರಾ 2, ಇಶಾಂತ್ ಶರ್ಮಾ ಹಾಗೂ ವರುಣ್ ಆರೋನ್ ತಲಾ 1 ವಿಕೆಟ್‌ಗಳನ್ನು ಕೆಡವಿದರು.
ಇನ್ನಿಂಗ್ಸ್ ಮುನ್ನಡೆಯತ್ತ ಭಾರತ: ಲಂಕಾ ನೀಡಿದ 184ರ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾದ ಆರಂಭಿಕ ಆಟಗಾರರಾದ ಕನ್ನಡಿಗ ಕೆ.ಎಲ್.ರಾಹುಲ್ ಹಾಗೂ ಶಿಖರ್ ಧವನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು ಆದರೆ 7 ರನ್‌ಗಳನ್ನು ಗಳಿಸಿದ್ದ ರಾಹುಲ್‌ರನ್ನು ಪ್ರಸಾದ್ ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿಕೊಂಡರೆ, ನಂತರ ಬಂದ ರೋಹಿತ್ ಶರ್ಮಾರನ್ನು ನಾಯಕ ಮ್ಯಾಥ್ಯೂಸ್ ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು.
ಕೊಹ್ಲಿ- ಧವನ್ ಜುಗಲ್‌ಬಂದಿ: 28 ರನ್‌ಗಳಿಗೆ 2 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಆಸರೆಯಾದಂತೆ ಬ್ಯಾಟ್ ಬೀಸಿದ ನಾಯಕ ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ ಅವರು ತಂಡಕ್ಕೆ ಇನ್ನಿಂಗ್ಸ್ ಮುನ್ನಡೆ ದೊರಕಿಸುವತ್ತ ಹೆಜ್ಜೆಹಾಕಿದ್ದಾರೆ.ಲಂಕಾದ ಎಲ್ಲಾ ಬೋಲರ್‌ಗಳನ್ನು ದಂಡಿಸಿದ ಧವನ್ 92 ಎಸೆತಗಳಲ್ಲಿ 6 ಬೌಂಡರಿಗಳ ಸಹಿತ ಅರ್ಧಶತಕ ಗಳಿಸಿದರೆ ಕೊಹ್ಲಿ ಕೂಡ 44 ರನ್‌ಗಳನ್ನು ಅರ್ಧಶತಕ ದ ಹೊಸ್ತಿನಲ್ಲಿದ್ದರು. 31ನೆ ಓವರ್‌ನ ವೇಳೆಗೆ ಭಾರತ 2 ವಿಕೆಟ್‌ಗಳನ್ನು ಕಳೆದುಕೊಂಡು 124 ರನ್‌ಗಳಿಸಿತ್ತು.