ತಮ್ಮ ಪತಿಯಿಂದ ವಿಚ್ಛೇದನ ಪಡೆದಿರುವ ಬಾಲಿವುಡ್ ನಟಿ ಹಾಗೂ ನಿರ್ಮಾಪಕಿ ಪೂಜಾ ಭಟ್, ತನ್ನ ಅಂತರಂಗದ ಭಾವನೆಯನ್ನು ಬಿಚ್ಚಿಟ್ಟಿದ್ದು ತಾವು ವಿಚ್ಛೇದನ ಬಯಸಿದ್ದೇಕೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ವೈವಾಹಿಕ ಸಂಬಂಧವನ್ನು ಯಾವುದೇ ಪರವಾನಗಿಯಿಂದ ಶಾಶ್ವತವಾಗಿಡಲು ಸಾಧ್ಯವಿಲ್ಲ ಎಂದಿರುವ ಪೂಜಾ ಭಟ್, ಯಶಸ್ವಿ ದಾಂಪತ್ಯ ಎಂದು ಸಾಬೀತುಪಡಿಸಲು ಇದರಿಂದ ಅಸಾಧ್ಯ ಎಂದು ಹೇಳುವ ಮೂಲಕ ತಮ್ಮ ಪತಿಯಾಗಿದ್ದ ಮನಿಷ್ ಮಖೀಜಾ ಅವರಿಂದ ದೂರವಾಗುವುದು ನನ್ನ ಉದ್ದೇಶವಲ್ಲ. ಆದರೆ ನನಗೆ ಮನಸ್ಸಿಗೆ ಬಂದಂತೆ ನನ್ನ ಇಚ್ಚೆಗೆ ಅನುಸಾರವಾಗಿ ಜೀವನ ನಡೆಸುವುದನ್ನು ನಾನು ಬಯಸಿದ್ದೇನೆ ಎಂದು ತಿಳಿಸಿದ್ದಾರೆ.
ಸಂಬಂಧಗಳನ್ನು ಬೆಸೆಯುವುದು ಪ್ರಮಾಣ ಪತ್ರಗಳಾಗಲೀ, ಮದುವೆ ಆಗಲಿ ಅಲ್ಲ, ಇದರಿಂದ ಸಂಬಂಧ ಬೆಳೆಯುವುದೂ ಇಲ್ಲ, ಮುರಿಯುವುದೂ ಇಲ್ಲ ಎಂದಿರುವ ಪೂಜಾ, ಹನ್ನೊಂದು ವರ್ಷದ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಲು ತಮಗೆ ಸ್ವತಂತ್ರತೆ ಇಲ್ಲದಿರುವುದೇ ಕಾರಣ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.