ಬಾಲಿವುಡ್ ಚಿತ್ರರಂಗದಲ್ಲಿ ನಟ- ನಟಿಯರಷ್ಟೇ ಅಲ್ಲದೇ ಅವರ ಮಕ್ಕಳೂ ಸಹ ಸದಾ ಸುದ್ದಿಯಲ್ಲಿರುತ್ತಾರೆ. ಕಾರ್ಯಕ್ರಮಗಳಲ್ಲಿ ಇವರುಗಳು ಪಾಲ್ಗೊಂಡ ವೇಳೆ ಕ್ಯಾಮೆರಾ ಕಣ್ಣು ಸದಾ ಅವರ ಮೇಲೆಯೇ ಇರುತ್ತದೆ.
ಈ ಹಿಂದೆ ಬಾಲಿವುಡ್ ಬಾದ್ ಶಾ ಶಾರೂಕ್ ಖಾನ್ ಅವರ ಪುತ್ರ ಆರ್ಯನ್ ಖಾನ್, ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ಜೊತೆ ಅತ್ಮೀಯ ಭಂಗಿಯಲ್ಲಿದ್ದ ವೇಳೆ ಕ್ಯಾಮರಾ ಕಣ್ಣಿಗೆ ಸೆರೆಯಾಗಿ ಸುದ್ದಿಯಾಗಿದ್ದರು.
ಇದೀಗ ಖ್ಯಾತ ನಟಿ ಶ್ರೀದೇವಿ ಪುತ್ರಿ ಖುಷಿ, ಸೈಫ್ ಆಲಿ ಖಾನ್ ಅವರ ಪುತ್ರ ಇಬ್ರಾಹಿಂ ಜೊತೆ ಕ್ಯಾಮರಾಕ್ಕೆ ಪೋಸ್ ಕೊಟ್ಟಿದ್ದಾರೆ. ಇಬ್ರಾಹಿಂ, ಸೈಫ್ ಆಲಿಖಾನ್ ರ ಮಾಜಿ ಪತ್ನಿ ಅಮೃತಾ ಸಿಂಗ್ ಮಗನಾಗಿದ್ದರೆ, ಖುಷಿ, ಖ್ಯಾತ ನಿರ್ಮಾಪಕ ಬೋನಿ ಕಪೂರ್ ಹಾಗೂ ಶ್ರೀದೇವಿಯವರ ಎರಡನೇ ಪುತ್ರಿಯಾಗಿದ್ದಾಳೆ. ಶ್ರೀದೇವಿಯವರ ಮೊದಲ ಪುತ್ರಿ ಜಾಹ್ನವಿ ಬಾಲಿವುಡ್ ಚಿತ್ರರಂಗಕ್ಕೆ ಕಾಲಿರಿಸಲು ಸಜ್ಜಾಗಿದ್ದು, ಖುಷಿ ಸಹ ಅಕ್ಕನನ್ನೇ ಅನುಸರಿಸಲು ಮುಂದಾಗಿದ್ದಾರೆ.