ಮನೋರಂಜನೆ

ಒಬ್ಬೊಂಟಿಯಾಗಿರೋದೇ ನನಗೆ ತುಂಬಾ ಇಷ್ಟ: ಸೋನಮ್ ಕಪೂರ್

Pinterest LinkedIn Tumblr

sonamಸಿನಿಮಾ ನಟಿಯರು ಅಂದ ಮೇಲೆ ಅವರ ಹೆಸರು ಒಬ್ಬೊಬ್ಬ ನಟ ಜೊತೆ ಥಳುಕು ಹಾಕಿಕೊಳ್ಳೋದು ಸಾಮಾನ್ಯ. ಆದ್ರೆ ನಟಿ, ಸೋನಮ್ ಮಾತ್ರ ಅದಕ್ಕೆ ತುಸು ಭಿನ್ನವಾಗಿ ಕಾಣುತ್ತಾರೆ. ಇತ್ತೀಚೆಗೆ ಫ್ಯಾಶನ್ ಶೋ ಒಂದರಲ್ಲಿ ಭಾಗವಹಿಸಿದ ಸೋನಮ್ ಅವರನ್ನು ಪರ್ತಕರ್ತರೋಬ್ಬರು ನೀವು ಯಾವಾಗ ಮದುವೆಯಾಗುತ್ತೀರಿ ಅಂತಾ ಕೇಳಿದ್ರಂತೆ ಅದಕ್ಕೆ ಸೋನಮ್ ನಾನು ಸಿಂಗಲ್ ಆಗಿ ಇರೋದನ್ನು ತುಂಬಾನೇ ಎಂಜಾಯ್ ಮಾಡುತ್ತಿದ್ದೇನೆ ಅಂತಾ ಹೇಳಿದ್ದಾರೆ.
ಇನ್ನು ಫ್ಯಾಶನ್ ಶೋದಲ್ಲಿ ಸೋನಮ್ ಪಕ್ಕಾ ವಾರಾಣಾಸಿಯ ವಧುವಾಗಿ ಮಿಂಚಿದ್ರು. ಕೆಂಪು ಬಣ್ಣದ ಲೆಹಂಗಾ ಧರಿಸಿ ಹೆಜ್ಜೆ ಹಾಕಿದ ಸೋನಮ್ ಪಕ್ಕಾ ಮದುಮಗಳ ಲುಕ್ ನಲ್ಲಿದ್ದರು. ಇನ್ನು ಸೋನಮ್ ಗೆ ಕೂಡ ಈ ಉಡುಗೆ ತುಂಬಾನೇ ಇಷ್ಟವಾಗಿದೆಯಂತೆ. ನಾನು ಈವರೆಗೆ ಸಾಂಪ್ರದಾಯಿಕ ಉಡುಗೆಯಲ್ಲಿ ರ್ಯಾಂಪ್ ಮೇಲೆ ಹೆಜ್ಜೆ ಹಾಕಿಕರಲಿಲ್ಲ. ಆದ್ರೀಗ ನನ್ನ ಕನಸು ನನಸಾಗಿದೆ ಅಂತಾ ಸೋನಮ್ ಖುಷಿ ವ್ಯಕ್ತಪಡಿಸಿದ್ರು.

ಸದ್ಯ ಸೋನಮ್  ಸಲ್ಮಾನ್ ಖಾನ್ ಅವರೊಂದಿಗೆ ಪ್ರೇಮ್ ರತನ್ ಧನ್ ಪಾಯೋ ಸಿನಿಮಾದಲ್ಲಿ ನಟಿಸುತ್ತಿದ್ದು, ಶೂಟಿಂಗ್ ಹಂತದಲ್ಲಿದೆ. ಈಗಾಗಲೇ ಸೋನಮ್ ಕಪೂರ್ ಹಾಗೂ ಸಲ್ಮಾನ್ ಕೆಮೆಸ್ಟ್ರಿಯ ಬಗ್ಗೆ ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆ ಗರಿಗೆದರಿದೆ.

Write A Comment