ಮನೋರಂಜನೆ

ಕಂಗನಾರಿಗೆ ತಡರಾತ್ರಿ ಕರೆ ಮಾಡಿದ ಸಲ್ಮಾನ್ ಖಾನ್ !

Pinterest LinkedIn Tumblr

salluಬಾಲಿವುಡ್ ನ ಪ್ರಖ್ಯಾತ ನಟ ಸಲ್ಮಾನ್ ಖಾನ್ ತಡರಾತ್ರಿ ನಟಿ ಕಂಗನಾರಿಗೆ ದೂರವಾಣಿ ಕರೆ ಮಾಡಿ ಆಫರ್ ಒಂದನ್ನು ನೀಡಿದ್ದು ಕಂಗನಾ ಸಹ ಖುಷಿಯಿಂದ ಒಪ್ಪಿಕೊಂಡಳಂತೆ. ಅರೇ, ಇದೇನು ಅಂತೀರಾ..? ಹಾಗಿದ್ದರೆ ಓದಿ.

ಹೌದು. ‘ಕಟ್ಟಿ ಬಟ್ಟಿ’ ಚಿತ್ರಕ್ಕಾಗಿ ನಾಯಕಿಯನ್ನು ಹುಡುಕುತ್ತಿದ್ದ ನಿರ್ದೇಶಕ ನಿಖಿಲ್ ಅದ್ವಾನಿ ಅವರು ಸಲ್ಮಾನ್ ಖಾನ್ ಅವರನ್ನು ಭೇಟಿಯಾಗಿ ಕಥೆಯನ್ನು ಹೇಳಿದ್ದಾರೆ. ಅಷ್ಟೇ ಅಲ್ಲ, ಈ ಚಿತ್ರಕ್ಕೆ ಯಾವ  ನಟಿ ಒಪ್ಪಬಹುದು ಎಂಬ ಸಲಹೆಯನ್ನು ಮುಂದಿಟ್ಟರಂತೆ. ತಕ್ಷಣ ಸಲ್ಮಾನ್ ಕಂಗನಾಳನ್ನು ಸೂಚಿಸಿದ್ದು ಮಾತ್ರವಲ್ಲ, ಆಕೆಗೆ ಕರೆ ಮಾಡಿ ವಿಷಯ ತಿಳಿಸಿದರಂತೆ.

ಸಲ್ಮಾನ್ ಮಾತಿಗೆ ಮಣಿದ ಕಂಗನಾ ಖುಷಿಯಿಂದ ಚಿತ್ರದಲ್ಲಿ ನಟಿಸಲು ಸಹಿ ಹಾಕಿದ್ದು ಈ ಕುರಿತು ಮಾತನಾಡಿದ ನಿಖಿಲ್ ಅದ್ವಾನಿ ಈ ಮೊದಲು ಸಲ್ಲು ಜೊತೆ ‘ಸಲಾಂ ಎ ಇಷ್ಕ್’ ಚಿತ್ರದಲ್ಲಿ ಕೆಲಸ ಮಾಡಿದ್ದರು. ಹೀಗಾಗಿ ಉತ್ತಮ ಒಡನಾಟ ಇದ್ದ ಅದ್ವಾನಿ ಕಟ್ಟಿ ಬಟ್ಟಿ ಕಥೆಯನ್ನು ಸಲ್ಮಾನ್‍ಗೆ ತೋರಿಸಿದ ಕೂಡಲೇ ಕಥೆ ಇಷ್ಟವಾಗಿ ಚಿತ್ರದಲ್ಲಿನ ಪಾಯಲ್ ಪಾತ್ರಕ್ಕೆ ಕಂಗನಾ ಪರ್ಫೆಕ್ಟ್ ಎಂದು ತಿಳಿಸಿದ್ದು  ತಕ್ಷಣ ಆಕೆಗೆ ಕರೆ ಮಾಡಿ ಅಚಿತ್ರದಲ್ಲಿ ನಟಿಸಲು ಒಪ್ಪಿಸಿದರು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಅಂದ ಹಾಗೆ ಇಮ್ರಾನ್ ಖಾನ್ ಹಾಗೂ ಕಂಗನಾ ನಟಿಸಿರುವ ಈ ಚಿತ್ರ ಸೆ.18ರಂದು ತೆರೆಕಾಣಲಿದ್ದು ಆಕೆಯ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

Write A Comment