ಮನೋರಂಜನೆ

ಸಲ್ಮಾನ್ ಖಾನ್ ನನ್ನ ಜೀವನದ ವಿಶೇಷ ವ್ಯಕ್ತಿ: ಜಾಕ್ವೆಲಿನ್ ಫೆರ್ನಾಂಡೀಸ್

Pinterest LinkedIn Tumblr

jakಸಲ್ಮಾನ್ ಖಾನ್ ನನ್ನ ಜೀವನದಲ್ಲಿ ಅತ್ಯಂತ ಸ್ಪೆಷಲ್ ವ್ಯಕ್ತಿ ಅಂತಾ ನಟಿ ಜಾಕ್ವೆಲಿನ್ ಫ್ರೆರ್ನಾಂಡೀಸ್ ಹೇಳಿದ್ದಾಳೆ. ನನ್ನ ವೃತ್ತಿ ಜೀವನಕ್ಕೊಂದು ತಿರುವು ಕೊಟ್ಟವರು ಸಲ್ಲು, ನಾನು ಅವರನ್ನು ಯಾವತ್ತೂ ಮೆರೆಯಲ್ಲ ಅಂತಾ ಜಾಕಿ ಹೇಳಿದ್ದಾಳೆ.

2014ರಲ್ಲಿ ಬಿಡುಗಡೆಯಾದ ಸಲ್ಮಾನಾ ಖಾನ್ ಅಭಿನಯದ  ಕಿಕ್ ಸಿನಿಮಾದಲ್ಲಿ ಜಾಕ್ವೆಲಿನ್ ಸಲ್ಮಾನ್ ಖಾನ್ ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಜಾಕಿಗೆ ಬಾಲಿವುಡ್ ನಲ್ಲಿ ಒಂದು ನೆಲೆ ತಂದುಕೊಟ್ಟಿತ್ತು. ಅಂದಿನಿಂದ ಜಾಕ್ವೆಲಿನ್ ಹಾಗದೂ ಸಲ್ಲು ನಡುವೆ ಸ್ನೇಹ ಬೆಳೆದಿತ್ತು. ಇನ್ನೊಂದು ವಿಶೇಷ ಅಂದ್ರೆ ಜಗತ್ತಿನಲ್ಲಿ ನಾನು ಅತ್ಯಂತ ಹೆಚ್ಚಾಗಿ ನಂಬುವ ವ್ಯಕ್ತಿ ಅಂದ್ರೆ ಅದು ಸಲ್ಮಾನ್ ಖಾನ್ ಮಾತ್ರ ಅಂತಾ ಜಾಕ್ವೆಲಿನ್ ಹೇಳಿದ್ದಾರೆ.

ಇನ್ನು ಜಾಕ್ವೆಲಿನ್ ಸಲ್ಮಾನ್ ಖಾನ್ ಅವರಿಂದ ಸಿನಿಮಾಕ್ಕೆ ಸಂಬಂಧಿಸಿ ಮಾತ್ರವಲ್ಲದೇ  ವೈಯುಕ್ತಿಕ ಜೀವನಕ್ಕೂ ಬೇಕಾದಂತಹ ಸಲಹೆಗಳನ್ನು ಮಾಡುತ್ತಾರಂತೆ. ಇನ್ನು ಸಲ್ಮಾನ್ ಖಾನ್ ಗೆ ಏನೋ  ಒಂದು ಶಕ್ತಿಯಿದೆ ಎಂದಿರುವ ಜಾಕಿಅವರಲ್ಲಿ ಪ್ರೇಕ್ಷಕರನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಶಕ್ತಿ ಎಂದಿದ್ದಾರೆ. ಆದ್ರೆ ಸಲ್ಮಾನ್ ಖಾನ್ ಅವರನ್ನು ಸಿಕ್ಕಾಪಟ್ಟೆ ಹೊಗಳಿರೋದು ಮಾತ್ರ ಬಾಲಿವುಡ್ ನಲ್ಲಿ ಹಲವು ಅನುಮಾನಗಳನ್ನು ಹುಟ್ಟಿ ಹಾಕಿದೆ.

Write A Comment