ಬಾಲಿವುಡ್ ನಟ ಅಕ್ಷಯ್ ಕುಮಾರ್ ತೆಲುಗಿನ ಖ್ಯಾತ ನಟ ರಾಣಾ ದಗ್ಗುಬಾಟಿ ಜೊತೆಗೂಡಿ ತೆಲುಗು ಚಿತ್ರವೊಂದನ್ನು ನಿರ್ಮಿಸಲು ಮುಂದಾಗಿದ್ದಾರೆ.
ಮರಾಠಿಯ ಯಶಸ್ವಿ ಚಿತ್ರ ‘ಪೋಸ್ಟರ್ ಬಾಯ್ಸ್’ ಚಿತ್ರವನ್ನು ತೆಲುಗಿಗೆ ರಿಮೇಕ್ ಮಾಡಲು ಮುಂದಾಗಿರುವ ಈ ಇಬ್ಬರು ನಟರು, ತೆಲುಗಿನಲ್ಲೂ ಸಹ ‘ಪೋಸ್ಟರ್ ಬಾಯ್ಸ್’ ಎಂದೇ ಹೆಸರಿಡಲಿದ್ದರೆನ್ನಲಾಗಿದೆ.
ಗೋಪಿ ಗಣೇಶ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ತಾರಾ ಬಳಗದ ಆಯ್ಕೆ ಈಗಾಗಲೇ ಹೈದರಾಬಾದಿನ ರಾಮಾನಾಯ್ಡು ಸ್ಟುಡಿಯೋದಲ್ಲಿ ಆರಂಭವಾಗಿದೆ ಎನ್ನಲಾಗಿದೆ. ರಾಣಾ ದಗ್ಗುಬಾಟಿ ಜೊತೆಗೂಡಿ ತೆಲುಗು ಚಿತ್ರ ನಿರ್ಮಿಸುತ್ತಿರುವುದನ್ನು ಖಚಿತಪಡಿಸಿರುವ ಅಕ್ಷಯ್ ಕುಮಾರ್ ‘ಬೇಬಿ’ ಚಿತ್ರದಲ್ಲಿ ತಮ್ಮೊಂದಿಗೆ ನಟಿಸಿದ್ದ ರಾಣಾ ಅತ್ಮೀಯ ಸ್ನೇಹಿತರಾಗಿದ್ದು, ತೆಲುಗು ಪ್ರೇಕ್ಷಕರು ತಮ್ಮ ಚಿತ್ರವನ್ನು ಯಶಸ್ವಿಗೊಳಿಸುವ ಭರವಸೆ ವ್ಯಕ್ತಪಡಿಸಿದ್ದಾರೆ.