ಈಗ ಬಾಲಿವುಡ್‌ನಲ್ಲಿ ಬಯೋಪಿಕ್(ಜೀವನಾಧಾರಿತ ಕಥೆ) ಚಿತ್ರಗಳ ಜಮಾನ. ಒಂದು ಕಡೆ ‘ಝಾನ್ಸಿ ರಾಣಿ’, ಇನ್ನೊಂದು ಕಡೆ ಅಂಡರ್ ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂ ಸಹೋದರಿ, ಮುಂಬೈ ಅಂಡರ್ ವರ್ಲ್ಡ್ ರಾಣಿ ‘ಹಸೀನಾ ಪಾರ್ಕರ್’.
ಈ ಸಂದರ್ಭದಲ್ಲಿ ಹಾಟ್ ಬೆಡಗಿ ‘ಮರ್ಡರ್ ಮಲ್ಲಿಕಾ’ ಅರ್ಥಾತ್ ಮಲ್ಲಿಕಾ ಶೆರವಾತ್‌ಗೆ ನೀವು ಯಾರ ಬಯೋಪಿಕ್ ಚಿತ್ರದಲ್ಲಿ ಕಾಣಿಸಿಕೊಳ್ಳಲು ಬಯಸುತ್ತೀರಾ? ಎಂದು ವರದಿಗಾರರೊಬ್ಬರು ಕೇಳಿ ಬಿಟ್ಟಿದ್ದಾರೆ. ಬಾಲಿವುಡ್ ಬಿಚ್ಚಮ್ಮನ ಉತ್ತರದಿಂದ ವರದಿಗಾರ ಬೆಚ್ಚಿಬಿದ್ದದ್ದಂತೂ ಸತ್ಯ. ಏಕೆ ಗೊತ್ತಾ? ಮಲ್ಲಿಕಾಗೆ ಮಹಾಭಾರತದಲ್ಲಿ ದ್ರೌಪದಿಯಾಗಬೇಕಂತೆ!
ದ್ರೌಪದಿಯೇ ಏಕೆ ಎಂದಿದ್ದಕ್ಕೆ, ‘ನನ್ನ ಪ್ರಕಾರ ದ್ರೌಪದಿಯು ಪೌರಾಣಿಕ ಕಥೆಯ ಅತ್ಯಂತ ಆಕರ್ಷಿಣಿಯ ಸುಂದರಿ, ಅಷ್ಟೇ ಅಲ್ಲ ಅತೀ ಬಲಿಷ್ಠ ಮಹಿಳೆ’ ಎಂದು ಬಿಡುವುದೇ?
ಇನ್ನು ಮಲಿಕಾಗೆ ಕೈ ತುಂಬಾ ಆಫರ್‌ಗಳು ಬರುತ್ತಿವೆಯಂತೆ. ಆದರೆ ಆಕೆ ಉತ್ತಮ ಚಿತ್ರಕಥೆಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾಳಂತೆ. ಅಂದಹಾಗೆ ಮಹಾಭಾರತದ ಪೌರಾಣಿಕ ಮಹಾಕಾವ್ಯ ಚಲನಚಿತ್ರವಾದರೆ, ದ್ರೌಪದಿ ಪಾತ್ರ ಸೆಕ್ಸಿ ಕ್ವೀನ್ ಮಲ್ಲಿಕಾ ಶೆರಾವತ್‌ಗೆ ಸಿಗಲಿದೆಯೇ ಎಂಬುದೇ ಈಗ ಪ್ರಶ್ನೆ.