ದಕ್ಷಿಣ ಭಾರತದ ಈ ಖ್ಯಾತ ನಟಿಗೆ ಇತ್ತೀಚೆಗೆ ತನ್ನ ಜೀವನದಲ್ಲಿ ನಡೆದ ಪ್ರಮುಖ ಘಟನೆಯಿಂದ ನೋವಾಗಿದೆಯಾ ? ಹಾಗಾಗಿಯೇ ಇಂತಹ ಹೇಳಿಕೆ ನೀಡಿದ್ದಾರಾ? ಹಾಗಾದರೇ ಅವರು ನೀಡಿದ ಹೇಳಿಕೆಯಾದರೂ ಏನು ಎಂಬುದನ್ನು ತಿಳಿಯಲು ಈ ಸ್ಟೋರಿ ಓದಿ.
ನಟಿ ತ್ರಿಷಾ ಕೃಷ್ಣನ್, ತೆಲುಗು ಹಾಗೂ ತಮಿಳಿನ ಬಹುತೇಕ ಖ್ಯಾತ ನಟರೊಂದಿಗೆ ಈಗಾಗಲೇ ನಟಿಸಿದ್ದು, ಇದುವರೆಗೂ ತ್ರಿಷಾ ಕೃಷ್ಣನ್ 48 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕಮಲ ಹಾಸನ್ ಅವರೊಂದಿಗಿನ ಚಿತ್ರ ಹಾಗೂ ಖ್ಯಾತ ನಿರ್ದೇಶಕ ಸುಂದರ್ ಅವರ ಮತ್ತೊಂದು ಚಿತ್ರಗಳ ಚಿತ್ರೀಕರಣ ಶೇ.90 ರಷ್ಟು ಮುಗಿದಿದ್ದು, ಯಾವ ಚಿತ್ರ ತ್ರಿಷಾ ಕೃಷ್ಣನ್ ಅವರ 50 ನೇ ಚಿತ್ರವಾಗಲಿದೆ ಎಂಬ ಕುತೂಹಲ ಮೂಡಿದೆ.
ತ್ರಿಷಾ ಅವರ ನಿಶ್ಚಿತಾರ್ಥ ತಮಿಳಿನ ಖ್ಯಾತ ನಿರ್ಮಾಪಕ ವರುಣ್ ಮಣಿಯನ್ ಜೊತೆ ಉಭಯ ಕುಟುಂಬಗಳ ಸಮ್ಮತಿಯೊಂದಿಗೆ ಅದ್ದೂರಿಯಾಗಿ ನೆರವೇರಿತ್ತು. ಆದರೆ ಕೆಲ ತಿಂಗಳುಗಳಲ್ಲೇ ಈ ನಿಶ್ಚಿತಾರ್ಥ ಮುರಿದ್ದು ಬಿದ್ದಿದ್ದು ಇದನ್ನು ತ್ರಿಷಾ ಕೃಷ್ಣನ್ ಅವರೇ ಅಧಿಕೃತವಾಗಿ ಘೋಷಿಸಿದ್ದರು. ನಿಶ್ಚಿತಾರ್ಥ ರದ್ದಾಗುವುದಕ್ಕೆ ಸ್ಪಷ್ಟ ಕಾರಣವನ್ನು ತ್ರಿಷಾ ನೀಡದಿದ್ದರೂ ಚಿತ್ರರಂಗ ಮಾತ್ರ ತಮಗೆ ತೋಚಿದ ರೀತಿಯಲ್ಲಿ ಮಾತನಾಡಿಕೊಂಡಿತ್ತು. ಇದೀಗ ತ್ರಿಷಾ ಕೃಷ್ಣನ್, ಮದುವೆಗಿಂತ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿರುವುದೇ ಬೆಟರ್ ಎಂದು ಹೇಳುವ ಮೂಲಕ ಹಲವರ ಹುಬ್ಬೇರುವಂತೆ ಮಾಡಿದ್ದಾರೆ. ಈ ಮಾತನ್ನು ಹೇಳಿರುವ ತ್ರಿಷಾ, ಹಾಗೆಂದು ತಾವು ಲಿವ್ ಇನ್ ರಿಲೇಶನ್ ನಲ್ಲಿರುವ ಕುರಿತು ಯೋಚಿಸಿಲ್ಲವೆಂದಿದ್ದಾರೆ.