ಮನೋರಂಜನೆ

ರಟ್ಟಾಯ್ತು ರಾಕಿಂಗ್ ಸ್ಟಾರ್ ಯಶ್ ಪಾತ್ರದ ಗುಟ್ಟು !

Pinterest LinkedIn Tumblr

yashರಾಕಿಂಗ್ ಸ್ಟಾರ್ ಯಶ್ ಅಭಿನಯಿಸುತ್ತಿರುವ ಮಂಜು ಮಾಂಡವ್ಯ ನಿರ್ದೇಶನದ ‘ಮಾಸ್ಟರ್ ಪೀಸ್’ ಚಿತ್ರದಲ್ಲಿ ಯಶ್ ಪಾತ್ರದ ಕುರಿತಾಗಿನ ಗುಟ್ಟು ಈಗ ರಟ್ಟಾಗಿದೆ.

ಈ ಚಿತ್ರದ ಯಾವೊಂದು ವಿವರವೂ ಬಹಿರಂಗವಾಗದಂತೆ ನಿರ್ದೇಶಕರು ಬಹು ಎಚ್ಚರ ವಹಿಸಿದ್ದು, ಈ ಚಿತ್ರದ ಕೆಲ ಸ್ಟಿಲ್ ಗಳು ಹೊರ ಬಿದ್ದ ವೇಳೆ ಯಶ್ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದ ಕಾರಣ ಅವರ ಪಾತ್ರದ ಕುರಿತಂತೆ ಕುತೂಹಲ ಮೂಡಿತ್ತು.

ಇದೀಗ ಹೊರ ಬಿದ್ದ ಮಾಹಿತಿ ಪ್ರಕಾರ ಯಶ್ ‘ಮಾಸ್ಟರ್ ಪೀಸ್’ ಚಿತ್ರದಲ್ಲಿ ತಮ್ಮ ಎಂದಿನ ಇಮೇಜ್ ನಿಂದ ಹೊರ ಬಂದಿದ್ದಾರೆಂದು ಹೇಳಲಾಗಿದೆ. ಯಶ್ ಅವರ ಪಾತ್ರ ನಾಯಕ ಹಾಗೂ ಖಳ ನಾಯಕನ ಎರಡೂ ಛಾಯೆಯನ್ನೂ ಹೊಂದಿದ್ದು, ಸದ್ಯದಲ್ಲೇ ಬಿಡುಗಡೆಯಾಗಬಹುದೆಂದು ನಿರೀಕ್ಷಿಸಲಾಗಿರುವ ‘ಮಾಸ್ಟರ್ ಪೀಸ್’ ಚಿತ್ರ ತೀವ್ರ ಕುತೂಹಲ ಹುಟ್ಟಿಸಿದೆ.

ಹೊಂಬಾಳೆ ಫಿಲ್ಮ್ಸ್ ನಿರ್ಮಿಸುತ್ತಿರುವ ಮಂಜು ಮಾಂಡವ್ಯ ನಿರ್ದೇಶನದ ಈ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಗೆ ನಾಯಕಿಯಾಗಿ ಶಾನ್ವಿ ಶ್ರೀವಾತ್ಸವ್ ನಟಿಸುತ್ತಿದ್ದಾರೆ. ರವಿಶಂಕರ್, ಸುಹಾಸಿನಿ ಹಾಗೂ ಚಿಕ್ಕಣ್ಣ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

Write A Comment