ಕಳೆದೊಂದು ವರ್ಷದಿಂದ ಸಾಕಷ್ಟು ಸುದ್ದಿ ಆಗುತ್ತಿದ್ದಾರೆ ದುನಿಯಾ ರಶ್ಮಿ. ಪ್ರೀತಿ ಕಿತಾಬ್ ಸಿನಿಮಾದಲ್ಲಿ ಸಂಶೋಧಕಿಯಾಗಿ ನಟಿಸಿರುವ ಇವರು, ಬರ್ತ್ ಚಿತ್ರದಲ್ಲಿ ಹುಟ್ಟಿನ ರಹಸ್ಯವನ್ನು ಭೇದಿಸುವ ಪಾತ್ರ ನಿರ್ವಹಿಸುತ್ತಿದ್ದಾರೆ. ಇದು ಅಪರೂಪದ ಪಾತ್ರವಾಗಿದ್ದು, ಅದಕ್ಕಾಗಿ ರಶ್ಮಿ ಸಾವು ಮತ್ತು ಹುಟ್ಟಿನ ರಹಸ್ಯದ ಕುರಿತಾದ ಪುಸ್ತಕಗಳನ್ನು ಓದುತ್ತಿದ್ದಾರೆ.
ಹಾಗಂತ ಇದು ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಕತೆ ಅಲ್ಲವಂತೆ. ಪ್ರೇಮಕತೆಯಲ್ಲೇ ಇಂಥದ್ದೊಂದು ವಿಷಯವನ್ನು ಸೇರಿಸಿದ್ದಾರೆ ನಿರ್ದೇಶಕರು. ಹೀಗಾಗಿ ರಶ್ಮಿಗೆ ಇದು ವಿಭಿನ್ನ ಪಾತ್ರ. ಪಾತರಗಿತ್ತಿ ಸಿನಿಮಾದ ನಂತರ ಕಳೆದೇ ಹೋಗಿದ್ದ ಶ್ರೀಕಿ ಈ ಚಿತ್ರದ ನಾಯಕ. ಇವರದ್ದು ಇಲ್ಲಿ ಲವರ್‌ಬಾಯ್ ಪಾತ್ರ. ಶಿವು ಹೊಳಲು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರಕ್ಕೆ ಮೊನ್ನೆಯಷ್ಟೇ ಮುಹೂರ್ತ ಕೂಡ ನಡೆದಿದೆ.