ಬೆಂಗಳೂರು: ಕಿಲ್ಲಿಂಗ್ ವೀರಪ್ಪನ್ ಚಿತ್ರ ನಿರ್ದೇಶನದಲ್ಲಿ ಬ್ಯುಸಿ ಇರುವ ರಾಮ್ ಗೋಪಾಲ್ ವರ್ಮಾ ಸದ್ದಿಲ್ಲದೇ ಕಿಚ್ಚ ಸುದೀಪ್ ಜೊತೆಗೆ ಮುಂದಿನ ಚಿತ್ರ ಮಾಡಲು ಮುಂದಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ವರ್ಮಾ ಸದ್ಯ ನಟ ಶಿವರಾಜ್‍ಕುಮಾರ್ ಜೊತೆಗೆ ಕಿಲ್ಲಿಂಗ್ ವೀರಪ್ಪನ್ ಚಿತ್ರದಲ್ಲಿ ನಿರತರಾಗಿದ್ದಾರೆ. ಇದರ ಜೊತೆಗೆ ವರ್ಮಾ ತಮ್ಮ ಮುಂದಿನ ಚಿತ್ರದ ಕೆಲಸವನ್ನೂ ಮಾಡುತ್ತಿದ್ದು. ಚಿತ್ರ ಬೆಂಗಳೂರು ಭೂಗತಪಾತಕಿಯ ಕಥೆಯೆಂದು ತಿಳಿದುಬಂದಿದೆ.
ಬೆಂಗಳೂರಿನ ಭೂಗತ ಪಾತಕಿ ಮುತ್ತಪ್ಪ ರೈ ಕುರಿತ ಕಥೆಯನ್ನು ವರ್ಮಾ ಮಾಡುತ್ತಿದ್ದು ಚಿತ್ರಕ್ಕೆ ಅಪ್ಪ ಎಂದು ಹೆಸರಿಟ್ಟಿದ್ದಾರೆ. ಇದೀಗ ಚಿತ್ರದಲ್ಲಿ ಮುತ್ತಪ್ಪ ರೈ ಪಾತ್ರವನ್ನು ಸುದೀಪ್ ಮಾಡಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ.
ಕತೆ, ಹೆಸರು ಎಲ್ಲವೂ ಸಿದ್ಧವಾಗಿದೆ. ಆದರೆ ಸುದೀಪ್ ಈ ಚಿತ್ರದಲ್ಲಿ ನಟಿಸುತ್ತಾರ ಎನ್ನುವುದಕ್ಕೆ ಯಾವುದೇ ಖಚಿತ ಮಾಹಿತಿ ಸಿಕ್ಕಿಲ್ಲ. ಸದ್ಯ ಈ ವಿಚಾರವಾಗಿ ಗಾಂಧಿನಗರದಲ್ಲಿ ಕುತೂಹಲ ಹೆಚ್ಚಿದೆ.